ಶಿರಸಿ: ಲಕ್ಷ ಕಂಠ ಗೀತ ಗಾಯನ ಕಾರ್ಯಕ್ರಮದ ಅಡಿಯಲ್ಲಿ ಮಾತಾಡ ಮಾತಾಡ ಕನ್ನಡ ಕಾರ್ಯಕ್ರಮ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ನಡೆದಿದ್ದು, ಕನ್ನಡದ ಕಂಪು ಹರಡಿತ್ತು.
ಸುಮಾರು 170 ಕ್ಕೂ ಹೆಚ್ಚು ಮಕ್ಕಳು ಕನ್ನಡ ಪರ ಘೋಷಣೆ ಮೊಳಗಿಸುತ್ತಾ ಜಾಥಾ ನಡೆಸಿದರು. ನಂತರ ಬಾರಿಸು ಕನ್ನಡ ಡಿಂ ಡಿಮವ ಎನ್ನುತ್ತ, ಜೋಗದ ಸಿರಿ ಬೆಳಕಿನಲ್ಲಿ ಹಾಡಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿ ಸಾರ್ಥಕತೆ ಮೆರೆದರು. ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಕಾರ್ಯಕ್ರಮ ಉದ್ಘಾಟಿಸಿದರೆ ಶಿಕ್ಷಕರು, ಆಡಳಿತ ಮಂಡಳಿಯವರು, ಗ್ರಾಮ ಪಂಚಾಯ್ತಿಯವರು, ಊರನಾಗರಿಕರು ಭಾಗವಹಿಸಿ ಸಹಕರಿಸಿದರು.