• first
  second
  third
  previous arrow
  next arrow
 • ಡಿ.ಜಿ ಶಾಸ್ತ್ರಿಯವರ ಸರಳತೆ-ಸಜ್ಜನಿಕೆ ಪ್ರಶಂಸನೀಯ: ಈಶ್ವರ ನಾಯ್ಕ

  300x250 AD

  ಕುಮಟಾ: ಪಟ್ಟಣದ ಗಿಬ್ ಬಾಲಕರ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೊಧ್ಯಾಪಕರಾಗಿ ಬೇರೆ, ಬೇರೆ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ 37 ವರ್ಷಗಳ ಕಾಲ ನಿರಂತರವಾಗಿ ಶಿಕ್ಷಣ ಕ್ಷೇತ್ರದಲ್ಲಿ ತನಗೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಡಿ.ಜೆ ಶಾಸ್ತ್ರಿ ಔತಣಕೂಟ ಏರ್ಪಡಿಸಿದ್ದರು.

  ಮೂಲತಃ ಕುಮಟಾ ತಾಲೂಕಿನ ಉಂಚಗಿಯ ದಿ.ಗೋಪಾಲ ವಿಷ್ಣು ಶಾಸ್ತ್ರಿ ಹಾಗೂ ದಿ.ನಾಗವೇಣಿ ದಂಪತಿಯ 6ನೇ ಪುತ್ರನಾಗಿ ಜನಿಸಿದ ಇವರು, ಉಂಚಗಿಯಲ್ಲಿ ಪ್ರಾಥಮಿಕ ಗಿಬ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಗಿಬ್ ಬಾಲಕರ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕಗೊಂಡಿದ್ದರು. ಅಲ್ಲದೇ, ಕಳೆದ 6 ವರ್ಷಗಳಿಂದ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  300x250 AD

  ಈ ಕಾರ್ಯಕ್ರಮಕ್ಕೆ ಆಗಮಿಸಿದ ಡಯಟ್ ಪ್ರಾಂಶುಪಾಲ ಈಶ್ವರ ಎಚ್.ನಾಯ್ಕ ಮಾತನಾಡಿ, ಡಿ.ಜಿ.ಶಾಸ್ತ್ರಿಯವರ ಸರಳತೆ ಮತ್ತು ಸಜ್ಜನಿಕೆ ಪ್ರಶಂಸನೀಯ ಎಂದರು. ಡಿ.ಜೆ ಶಾಸ್ತ್ರಿ ಮಾತನಾಡಿ, ನನ್ನ 37 ವರ್ಷಗಳ ಸೇವಾ ಅವಧಿಯಲ್ಲಿ ಸಹಕರಿಸಿದ ಇಲಾಖೆಯ ಅಧಿಕಾರಿಗಳಿಗೆ, ಮಾರ್ಗದರ್ಶಕರಿಗೆ ಮತ್ತು ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು.

  ಈ ಸಂದರ್ಭದಲ್ಲಿ ಉಪನಿರ್ದೇಶಕ ಹರೀಶ ಗಾಂವಕರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್ ಭಟ್, ಗಿಬ್ ಬಾಲಕಿಯರ ಮುಖ್ಯಾಧ್ಯಾಪಕಿ ಗೀತಾ ಪೈ, ಪಾಡುರಂಗ ವಾಗ್ರೆಕರ್, ವಿನಾಯಕ ಶಾನಭಾಗ, ಎಸ್.ಎಸ್ ಶಾಸ್ತ್ರಿ, ಎಸ್.ಬಿ ನಾಯ್ಕ ಇದ್ದರು.

  Share This
  300x250 AD
  300x250 AD
  300x250 AD
  Back to top