• first
  second
  third
  previous arrow
  next arrow
 • ವಿಜ್ಞಾನಗಳ ಸಂಸ್ಥೆಯಲ್ಲಿ ಕ್ರೀಡಾಕೂಟ ಸಂಘರ್ಷಕ್ಕೆ ಜಿಲ್ಲಾಧಿಕಾರಿ ಚಾಲನೆ

  300x250 AD

  ಕಾರವಾರ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ರೀಡಾಕೂಟ ಸಂಘರ್ಷ 2021ರ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಚಾಲನೆ ನೀಡಿದರು. ಕೊರೊನಾ ಸಮಯದಲ್ಲಿ ವೈದ್ಯರ ಸೇವೆಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಕ್ರೀಡೆಯ ಅವಶ್ಯಕತೆಯನ್ನು ತಿಳಿಸಿದರು.

  ನಂತರ ಸಭೆಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದಲ್ಲಿ ವಿದ್ಯಾರ್ಥಿಗಳ ನಾಗರಿಕ ಸೇವೆಯ ಬಗೆಗಿನ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು. ಕಾಲೇಜಿನ ನಿರ್ದೇಶಕ ಡಾ. ಗಜಾನನ ನಾಯಕ ಮಾತನಾಡಿ, ಸಂಸ್ಥೆಯ ಪ್ರಗತಿಯ ಕುರಿತು ವಿವರಿಸಿದರು ಹಾಗೂ ಜಿಲ್ಲಾಧಿಕಾರಿ ಕೊರೊನಾ ಸಂದರ್ಭದಲ್ಲಿ ಸಂಸ್ಥೆಗೆ ನೀಡಿದ ಸಹಾಯವನ್ನು ಸ್ಮರಿಸಿದರು.

  300x250 AD

  ಸಭೆಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಕುಡ್ತಲಕರ್, ಪ್ರಾಂಶುಪಾಲ ಡಾ. ಶಿವಕುಮಾರ ಜಿ. ಎಲ್, ಸ್ಥಾನಿಕ ವೈದ್ಯಾಧಿಕಾರಿ ಡಾ. ವೆಂಕಟೇಶ ಆರ್. , ವಿದ್ಯಾರ್ಥಿ ಒಕ್ಕೂಟ ಹಾಗೂ ಕನ್ನಡ ಸಂಘದ ಅಧ್ಯಕ್ಷ ಡಾ. ಮಂಜುನಾಥ ಭಟ್ಟ, ಕ್ರೀಡಾ ಒಕ್ಕೂಟ ಅಧ್ಯಕ್ಷ ಡಾ. ಅಮಿತ ಕಾಮತ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯತೀಶ್ ಹಾಗೂ ಕ್ರೀಡಾ ಕಾರ್ಯದರ್ಶಿ ಚಂದನ ಗುಂಡಗತ್ತಿ, ಸುಜನ ಎಚ್. ಎಸ್, ಖಚಾಂಚಿ ಬಿ. ಎ. ಅಭಿಷೇಕ ಇದ್ದರು. ವಿಜಯಕುಮಾರ ಬಿ. ಯು ಹಾಗೂ ಮೇಘನಾ ನಿರೂಪಿಸಿದರು. ವಿದ್ಯಾರ್ಥಿನಿ ಅಶ್ವಿನಿ ಹಾಗೂ ತಂಡದವರು ಗಣಪತಿಯ ಗೀತೆ ಹಾಡಿದರು. ಈ ಸಮಾರಂಭದಲ್ಲಿ ಸಂಸ್ಥೆಯ ಎಲ್ಲ ಬೋಧಕ ವೈದ್ಯರು ಹಾಗೂ ಬೋಧಕೇತರ ಇದ್ದರು.

  Share This
  300x250 AD
  300x250 AD
  300x250 AD
  Back to top