ಶಿರಸಿ: ಅಗಸ್ಟ್ 2021 ನೇ ಮಾಹೆಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಖಾತೆಗೆ ಅ.27ರ ಬುಧವಾರ ಜಮಾ ಆಗಿರುತ್ತದೆ ಎಂದು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅ.26 ರಂದು ಜುಲೈ ಮಾಹೆಯ ಪ್ರೋತ್ಸಾಹಧನ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗಿದ್ದು, ಈಗ ಅಗಸ್ಟ್ ಮಾಹೆಯ ಪ್ರೋತ್ಸಾಹಧನ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗಿದ್ದು ಹಾಲು ಉತ್ಪಾದಕ ರೈತರಿಗೆ ಇದರಿಂದ ಬಹಳ ಸಹಾಯವಾಗಲಿದೆ ಎಂದರು. ಸೆ. 2021 ರ ವರೆಗಿನ ಪ್ರೋತ್ಸಾಹ ಧನದ ಮಾಹಿತಿಯನ್ನು ನಮ್ಮಿಂದ ಈಗಾಗಲೇ ಕ್ಷೀರಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ಮತ್ತು ಅಕ್ಟೋಬರ್ ಮಾಹೆಯ ಮಾಹಿತಿಯನ್ನು ಕ್ಷೀರಸಿರಿ ತಂತ್ರಾಂಶದಲ್ಲಿ ಅಳವಡಿಸಲು ಸೂಕ್ತ ಮಾಹಿತಿಗಳನ್ನು ಪಡೆಯಲಾಗುತ್ತಿದೆ ಎಂದರು. ಅಗಸ್ಟ್ 2021 ರ ವರೆಗೆ ಸರ್ಕಾರದಿಂದ ಅತ್ಯಂತ ತ್ವರಿತವಾಗಿ ಪ್ರೋತ್ಸಾಹ ಧನವನ್ನು ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಸಪ್ಟೆಂಬರ್ ಮಾಹೆಯ ಪ್ರೋತ್ಸಾಹಧನವು ಕೂಡ ಶೀಘ್ರದಲ್ಲೇ ರೈತರ ಖಾತೆಗೆ ಸರ್ಕಾರದಿಂದ ಜಮಾ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಹಾಗೂ ಪ್ರೋತ್ಸಾಹಧನ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಕೆಶಿನ್ಮನೆ ಸೂಚಿಸಿದರು.