ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಅನುಷ್ಠಾನ ಮಠಗಳಲ್ಲಿ ಒಂದಾದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಿ.ಎನ್.ಹೆಗಡೆ ಬೊಮ್ಮನಳ್ಳಿ ಅವರು ಪುನರಾಯ್ಕೆಗೊಂಡಿದ್ದಾರೆ.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿ ಹಾಗೂ ಆಯ್ಕೆಯಾದ ಉಳಿದ ನಾಲ್ಕು ಅಂಗಸಂಸ್ಥೆಗಳ ಸದಸ್ಯರ ಸಭೆ ನಡೆದು ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸರ್ವಾನುಮಮತದಿಂದ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಳೆದ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಬೊಮ್ನಳ್ಳಿ ಅವರನ್ನು ಮೂರನೇ ಅವಧಿಗೂ ಹಾಗೂ ಕಾರ್ಯದರ್ಶಿಯಾಗಿ ಜಿ.ವಿ ಹೆಗಡೆ ಗೊಡವೆಮನೆ ಪುನರಾಯ್ಕಗೊಂಡು ಜವಬ್ದಾರಿ ನೊಗ ವಹಿಸಿಕೊಂಡರು.
ಶ್ರೀ ಭಗವತ್ಪಾದ ಪ್ರಕಾಶನದ ಕಾರ್ಯದರ್ಶಿಯಾಗಿ ಪ್ರೊ. ಕೆ.ವಿ ಭಟ್ ಪುನರಾಯ್ಕೆಗೊಂಡರೆ ಎಮ್ ಸಿ ಹೆಗಡೆ ಶಿರ್ಸಿಮಕ್ಕಿ ಸಹಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಉಪಾಧ್ಯಕ್ಷರಾಗಿ ಎಮ್ ಜಿ ಹೆಗಡೆ ಗಡೀಮನೆ, ಶಿವರಾಮ ಭಟ್ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ನಾರಾಯಣ ಭಟ್ ಬಳ್ಳಿ ಹಾಗೂ ಕಾರ್ಯದರ್ಶಿಯಾಗಿ ತ್ರಯಂಬಕ ಹೆಗಡೆ ಶೀಗೇಹಳ್ಳಿ ಆಯ್ಕೆಗೊಂಡರು. ಶ್ರೀ ಲಲಿತಾಂಬಾ ನಿಧಿ ಕಾರ್ಯದರ್ಶಿಯಾಗಿ ನಾರಾಯಣ ಹೆಗಡೆ ಗಡಿಕೈ ಪುನರಾಯ್ಕೆಗೊಂಡರು. ಎಲ್ಲ ಅಂಗಸಂಸ್ಥೆಗಳಿಗೆ ಶ್ರೀಗಳವರು ಅಧ್ಯಕ್ಷರಾಗಿ ಕಾರ್ಯಮಾಡಲಿದ್ದಾರೆ.
ಈ ವೇಳೆ ಆಶೀರ್ವಚನ ನುಡಿದ ಶ್ರೀಗಳು, ಮಠದಲ್ಲಿ ಆಗಬೇಕಾದ ಕೆಲಸದ ವೇಗ ಹೆಚ್ಚಿಸಬೇಕು. ಅರಿವಿನಲ್ಲಿ ಎರಡು ಭಾಗವಿದೆ. ಒಂದು ಹೊರದೃಷ್ಟಿ ಮತ್ತೊಂದು ಒಳದೃಷ್ಟಿ. ಶ್ರೀಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವುದು ಹೊರದೃಷ್ಟಿ. ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ದೆಯಿಂದ ತೊಡಗಿಸಿಕೊಳ್ಳುವುದು ಒಳದೃಷ್ಟಿ ಎಂದರು.
ನಂತರ ನಡೆದ ಕಾರ್ಯಾಗಾರದಲ್ಲಿ ಪ್ರಥಮ ಗೋಷ್ಠಿಯಲ್ಲಿ ಮಠದ ಗುರುಪರಂಪರೆ ಹಾಗೂ ಇತಿಹಾಸದ ಕುರಿತು ಡಾ. ಮಹಾಬಲೇಶ್ವರ ಭಟ್ ಕಿರುಕುಂಬತ್ತಿ, ದ್ವಿತೀಯ ಗೋಷ್ಠಿಯಲ್ಲಿ ಶ್ರೀಮಠದ ಆಡಳಿತ ವ್ಯವಸ್ಥೆ ಕುರಿತು ಆರ್ ಎಸ್ ಹೆಗಡೆ, ಪದಾಧಿಕಾರಿಗಳ ಕರ್ತವ್ಯ ಕುರಿತು ಎಮ್ ಜಿ ಹೆಗಡೆ ಗಡಿಮನೆ, ಪದಾಧಿಕಾರಿಗಳ ಮನೊಧರ್ಮ ಕುರಿತು ಸಚ್ಚಿದಾನಂದ ಹೆಗಡೆ ಭತ್ತಗುತ್ಗೆ, ಪದಾಧಿಕಾರಿಗಳ ವ್ಯಕ್ತಿಗತ ಆಚರಣೆ ಕುರಿತು ನಾರಾಯಣ ಮ ಹೆಗಡೆ ಗಡಿಕೈ ಮಾತನಾಡಿದರು.
ವಿ.ಎನ್.ಹೆಗಡೆ ಬೊಮ್ನಳ್ಳಿ ಸ್ವಾಗತಿಸಿದರು. ರಾಮಕೃಷ್ಣ ಶೇರುಗಾರ ಫಲಸಮರ್ಪಣೆ ಮಾಡಿದರು. ಆರ್ ಎನ್ ಭಟ್ ಸುಗಾವಿ ನಿರ್ವಹಣೆ ಮಾಡಿದರು.