ಶಿರಸಿ: ಸರ್ಕಾರದ ಆದೇಶದ ಮೇರೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉತ್ತರ ಕನ್ನಡ, ಸಾ.ಶಿ.ಇಲಾಖೆ ಶೈ.ಜಿ.ಉತ್ತರ ಕನ್ನಡ ಸಹಕಾರದೊಂದಿಗೆ ಕದಂಬ ಕಲಾ ವೇದಿಕೆ ಶಿರಸಿ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ನಿರ್ದೇಶನದಲ್ಲಿ ಗೀತಗಾಯನ ಅಭಿಯಾನದಲ್ಲಿ ಸಹಸ್ರ ಸಂಖ್ಯೆಯಲ್ಲಿ ಗಾಯಕರು ಭಾಗಿಯಾಗಿ ಕಾರ್ಯಕ್ರಮವನ್ನು ಚಂದಗಾಣಿಸಿದರು.
ನಾಡಗೀತೆ ಕುವೆಂಪು ಸಾಹಿತ್ಯದ, ಅಶ್ವತ್ಥ್‍ರವರ ಸ್ವರ ಸಂಯೋಜನೆಯ ಬಾರಿಸು ಕನ್ನಡ ಡಿಂಡಿಮವ, ನಿತ್ಯೋತ್ಸವ ಸಾಹಿತ್ಯ ಕೆ.ಎಸ್.ನಿಸಾರ ಅಹಮದ್ ಅವರ ಸಾಹಿತ್ಯದ, ಮೈಸೂರು ಅನಂತ ಸ್ವಾಮಿ ಸ್ವರ ಸಂಯೋಜನೆಯ ಜೋಗದ ಸಿರಿ ಬೆಳಕಿನಲ್ಲಿ, ಡಾ.ರಾಜಕುಮಾರ್ ಗಾಯನದ ಹಂಸಲೇಖಾ ಸಾಹಿತ್ಯ ಸಂಗೀತದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಿದರು.
ಶ್ರೀ ಮಾರಿಕಾಂಬಾ ಪ್ರೌಢಶಾಲೆ ಆವರಣದಲ್ಲಿ 4000 ಗಾಯಕರು, ಬನವಾಸಿ ದೇವಸ್ಥಾನದ ಎದುರು 2000, ಶ್ರೀನಿಕೇತನ ಶಾಲೆ ಇಸಳೂರು 1000, ಚಂದನ ಆಂಗ್ಲಮಾಧ್ಯಮ ಪ್ರೌಢಶಾಲೆ 650, ವೈ.ಟಿ.ಎಸ್.ಎಸ್. ಯಲ್ಲಾಪುರ 350, ತೇಲಂಗ ಪ್ರೌಢಶಾಲೆ 110, ನೆಹರೂ ಪ್ರೌಢಶಾಲೆ ಓಣಿಕೇರಿ 100 ಮಕ್ಕಳು ಭಾಗಿಯಾಗಿದ್ದರು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್’ನ ಹಾಗೂ ಕದಂಬ ಕಲಾ ವೇದಿಕೆ ಶಿರಸಿ ರತ್ನಾಕರ ತಿಳಿಸಿದರು.