ಶಿರಸಿ: ಕನ್ನಡ ನಾಡಿನ ಜವ್ದಾರಿಯುತ ಪ್ರಜೆಗಳಾಗಿ ಕನ್ನಡ ಭಾಷೆಯ ಬಗ್ಗೆ ಉದಾಸೀನತೆ ಬೇಡ. ಕನ್ನಡ ನಮ್ಮ ಉಸಿರು, ಕನ್ನಡದಲ್ಲೇ ಮಾತನಾಡುವ. ಕನ್ನಡ ಉಳಿಸಿ ಎಂಬ ಹೋರಾಟ ಮಾಡಬೇಕಾಗಿ ಬಂದಿರುವುದು ವಿಷಾದದ ಸಂಗತಿ ಎಂದು ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ ಹೇಳಿದರು.
ಅವರು ಇಂದು ಮಹಾವಿದ್ಯಾಲಯದಲ್ಲಿ ನಡೆದ ರಾಜ್ಯೋತ್ಸವದ ಪೂರ್ವಭಾವಿಯಾಗಿ ‘ಕನ್ನಡಕ್ಕಾಗಿ ನಾವು ಸಂಕಲ್ಪ ಕಾರ್ಯಕ್ರಮ’ದಲ್ಲಿ ಮಾತನಾಡುತ್ತಿದ್ದರು. ಭಾಷೆ, ಜಲ, ಗಡಿ ವಿಚಾರ ಬಂದಾಗ ಕನ್ನಡಿಗರೆಲ್ಲ ಒಂದಾಗಿರೋಣ. ಕನ್ನಡೇತರರು ಕನ್ನಡ ಕಲಿಯಲು ಕನ್ನಡ ಬಲ್ಲ ನಾವು ಅವರಿಗೂ ಸಹಾಯ ಮಾಡೋಣ. ಕನ್ನಡದ ಉತ್ಸವ ಆಚರಣೆ ಆಗಲಿ. ಅದಕ್ಕೆ ನಾವೆಲ್ಲ ಕೈಜೋಡಿಸೋಣ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.