ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸರ್ಕಾರ ಉಡುಗೊರೆ ನೀಡಿದೆ. 3% ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
2021 ರ ಜುಲೈ ತಿಂಗಳಿನಿಂದಲೇ ಪೂರ್ವಾನ್ವಯವಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಟ್ಟಿಭತ್ಯೆ ಮಂಜೂರು ಮಾಡಿದ್ದಾರೆ. ಈ ಹೆಚ್ಚಳದ ಮೂಲಕ ನೌಕರರ ಮೂಲ ವೇತನದ 21.50% ಗಳಷ್ಟಿದ್ದ ತುಟ್ಟಿಭತ್ಯೆ 24.50% ಗೆ ಏರಿಕೆಯಾದಂತಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಸಲ್ಲಿಸಿದ 24 ಗಂಟೆಗಳ ಒಳಗಾಗಿ ಈ ಮನವಿಗೆ ಸ್ಪಂದನೆ ನೀಡಿ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಮುಖ್ಯಮಂತ್ರಿಗಳಿಗೆ ಸಂಘ ಧನ್ಯವಾದ ತಿಳಿಸಿದೆ.