• first
    second
    third
    previous arrow
    next arrow
  • ಶಿರಸಿಯ ವಿವಿಧೆಡೆ ಅ.28, 29, 30ಕ್ಕೆ ವಿದ್ಯುತ್ ವ್ಯತ್ಯಯ

    300x250 AD

    ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಕೆ.ಪಿ.ಟಿ.ಸಿ.ಎಲ್ ಬೃಹತ್ತ ಕಾಮಗಾರಿ ರವರ 110ಕೆ.ವಿ ಲೈನ್ ಬದಲಾವಣೆ ಕಾಮಗಾರಿ ಹಾಗೂ 220/11 ಕೆ.ವಿ ಉಪಕೆಂದ್ರ ಎಸಳೆ, ಶಿರಸಿಯಲ್ಲಿ ಹೆಚ್ಚುವರಿ ಶಕ್ತಿ ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.28 ಗುರುವಾರ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವೆರೆಗೆ ಗ್ರಾಮೀಣ-1 ಶಾಖೆಯ ಬಿಸಲಕೊಪ್ಪ ಹಾಗೂ ದೊಡ್ನಳ್ಳಿ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ, ಬನವಾಸಿ ಶಾಖೆಯ ಅಂಡಗಿ ಹಾಗೂ ಭಾಷಿ11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

    ಹಾಗೂ ಅ.29 ಶುಕ್ರವಾರ ಹಾಗೂ 30 ಶನಿವಾರ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಪಟ್ಟಣ ಶಾಖೆಯ ಕಸ್ತೂರಬಾನಗರ 11 ಕೆ.ವಿ ಮಾರ್ಗದ ಮರಾಠಿಕೊಪ್ಪ, ಲಯನ್ಸ್‍ನಗರ, ಗುರುನಗರ, ಕೊಪ್ಪಳ ಕಾಲೋನಿ, ಪ್ರಗತಿ ನಗರ, ವಿದ್ಯಾನಗರ, ಸಹ್ಯಾದ್ರಿ ಕಾಲೋನಿ, ಕಾಲೇಜು ರಸ್ತೆ ಪ್ರದೇಶಗಳಲ್ಲಿ, ಗ್ರಾಮೀಣ-1 ಶಾಖೆಯ ತಾರಗೋಡ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    300x250 AD

    ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top