• first
    second
    third
    previous arrow
    next arrow
  • ಭರತನಾಟ್ಯ ಸ್ಪರ್ಧೆ; ಶ್ರೇಯಾ ದ್ವಿತೀಯ

    300x250 AD

    ಶಿರಸಿ: ಶರನ್ನವರಾತ್ರಿ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಕೆನರಾಪ್ಲಸ್ ವಾಹಿನಿ ಮತ್ತು ಸ್ನೇಹ ಎಂಟ್ರಪ್ರೈಸಸ್, ಕುಮಟಾದ ಸಹಯೋಗದಲ್ಲಿ ಪ್ರೌಢ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಆನ್ಲೈನ್ ಭರತನಾಟ್ಯ ಸ್ಪರ್ಧೆ -2021ಯಲ್ಲಿ ತಾಲೂಕಿನ ಮುಂಡಿಗೇಸರದ ಎಂ.ವಿ.ಶ್ರೇಯಾ ದ್ವಿತೀಯ ಸ್ಥಾನ ಪಡೆದಿದ್ದಾಳೆ.

    300x250 AD


    ನಗರದ ಸರಕಾರಿ ಶ್ರೀ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಈಕೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು 3,000ರೂ. ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ ಶಿಕ್ಷಕಿಯರು, ಸಿಬ್ಬಂದಿಗಳು, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top