• first
    second
    third
    previous arrow
    next arrow
  • ಕತ್ತಿಯಲ್ಲಿ ಕಡಿದು ತಂದೆಯನ್ನೇ ಕೊಂದ ಮಗ

    300x250 AD

    ಕುಮಟಾ: ಕ್ಷುಲ್ಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ತಂದೆಯನ್ನೇ ಕಡಿದು ಕೊಂದ ಹೃದಯ ವಿದ್ರಾವಕ ಘಟನೆ ತಾಲೂಕಿನ ಸಂತೆಗುಳಿ ಗ್ರಾ.ಪಂ ವ್ಯಾಪ್ತಿಯ ಕಲವೆಯಲ್ಲಿ ನಡೆದಿದೆ.

    ಪ್ರತಿ ದಿನವು ಸಂಜೆಯ ಹೊತ್ತಿಗೆ ಶ್ರೀಕಾಂತ ರಾಮಚಂದ್ರ ಗೌಡ (31) ಈತನು ಕುಡಿದು ಬಂದು ಸಣ್ಣ ಸಣ್ಣ ವಿಷಯದಲ್ಲಿ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ ಸಂಜೆ ಸುಮಾರು 7.35 ರ ಹೊತ್ತಿಗೆ ಮಗ ಶ್ರೀಕಾಂತ ರಾಮಚಂದ್ರ ಗೌಡ ಕುಡಿದ ಅಮಲಿನಲ್ಲೇ ಮನೆಗೆ ಬಂದಿದ್ದು, ಮನೆಯ ಗೇಟಿನ ಸರಗೋಲನ್ನ ಯಾಕೆ ಹಾಕಿದ್ದೀರಿ ಎಂದು ತಗಾದೆ ತೆಗೆದಿದ್ದಾನೆ. ಆಗ ಅಪ್ಪ ಮಗನ ಮಧ್ಯೆ ಜಗಳ ಆರಂಭವಾಗಿ, ನೀನು ದಿನಾಲೂ ಹಿಗೇ ಕುಡಿದು ಬಂದು ಜಗಳ ಮಾಡಿದರೆ ನಿನ್ನನ್ನ ಸಾಯಿಸಿ ಬಿಡುತ್ತೆನೆ ಎಂದು ತಂದೆ ರಾಮಚಂದ್ರ ಕುಪ್ಪು ಗೌಡ (55) ಹೇಳಿದ್ದಕ್ಕೆ ಸಿಟ್ಟಿಗೆದ್ದ ಮಗ ಅಲ್ಲೇ ವರಾಂಡಾದಲ್ಲಿದ್ದ ಕತ್ತಿಯಿಂದ ಆತನ ಮೇಲೆ ಹಲ್ಲೆ ನಡೆಸಿದ ಪರಿಣಾಮ, ತಂದೆ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

    300x250 AD

    ಈ ಕುರಿತು ತಾಯಿ ಸುಮಿತ್ರಾ ರಾಮಚಂದ್ರ ಗೌಡ ಕುಮಟಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸೈ ಆನಂದ ಮೂರ್ತಿ, ಪಿಎಸೈ ರವಿ ಗುಡ್ಡಿ, ಎ.ಎಸೈ ನಾಗಾರಜಾಪ್ಪ ಹಾಗೂ ತಂಡ ಆರೋಪಿಯನ್ನ ಭಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    Share This
    300x250 AD
    300x250 AD
    300x250 AD
    Back to top