ಕುಮಟಾ: ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕುಮಟಾ ಅಗ್ನಿ ಶಾಮಕ ಇಲಾಖೆಯ ರಾಜೇಶ್ ಕೆ. ಮಡಿವಾಳ ಭಾಗವಹಿಸಿ, ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಹಾಗೂ ಬಾಡಿ ಬಿಲ್ಡಿಂಗ್‍ನಲ್ಲಿ ಎರಡು ಬಂಗಾರದ ಪದಕ ಹಾಗೂ ಒಂದು ಬೆಳ್ಳಿ ಪದಕಗಳಿಸಿ, ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜನಾಥ ಸಾಲಿ ಹಾಗೂ ಕುಮಟಾ ಅಗ್ನಿಶಾಮಕ ಠಾಣಾಧಿಕಾರಿ ಟಿ.ಎನ್ ಗೊಂಡ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಹೆಲ್ತ್ ಪಾಯಿಂಟ್ ಜಿಮ್ ಕುಮಟಾರವರು ಅಭಿನಂದನೆ ತಿಳಿಸಿದ್ದಾರೆ.