• first
  second
  third
  previous arrow
  next arrow
 • ಕಲೆ- ಕಲಾವಿದನನ್ನು ಬೆಳೆಸುವ ಹೊಣೆ ಸಮಾಜದ ಮೇಲಿದೆ; ರವಿ ಹಳದೋಟ

  300x250 AD


  ಶಿರಸಿ: ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕಲಾವಿದನ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಹಾಗೇ ಯಾವುದೇ ಕಲೆ ನಿಂತ ನೀರಾಗಬಾರದು. ಕಲೆಯನ್ನು ಹಾಗೂ ಕಲಾವಿದನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಸಮಾಜದ ಕಲಾಭಿಮಾನಿಗಳಲ್ಲಿ ಹೆಚ್ಚಿನದ್ದಾಗಿರಬೇಕು ಎಂದು ಶಿರಸಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಶಿರಸಿ ತಾಲೂಕಾ ಪಂಚಾಯತ ಸದಸ್ಯ ರವಿ ಹೆಗಡೆ ಹಳದೋಟ ಹೇಳಿದರು.


  ತಾಲೂಕಿನ ವರ್ಗಾಸರದ ಪುಟ್ಟನಮನೆ ಕಲಾಭಿನವರಂಗ ಮಂದಿರದಲ್ಲಿ ನಾದ ಶಂಕರ(ರಿ)ಶಿರಸಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವುಗಳ ಸಹಯೋಗದಲ್ಲಿ ಏರ್ಪಡಿಸಲಾದ ಯಕ್ಷಗಾನ ಪ್ರದರ್ಶನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
  ಕಳೆದೆರಡು ವರ್ಷದಲ್ಲಿ ಸಾಂಸ್ಕøತಿಕ ಲೋಕಕ್ಕೆ ಬಹಳ ಆಘಾತವಾಗಿದ್ದು ಯುವ ಪೀಳಿಗೆಯಿಂದ ಕೆಲವೊಂದು ಕಲೆ ನಿರ್ಲಕ್ಷಿಸಲ್ಪಡುತ್ತಿರುವುದು ಕಾಣುತ್ತಿದೆ. ಇಂದಿನ ಮೊಬೈಲ್ ಯುಗ ಕೂಡಾ ಅದಕ್ಕೆ ಕಾರಣವಾಗಿದ್ದು ಆ ಕುರಿತಾಗಿ ಚಿಂತಕರು ಹಾಗೂ ಸಮಾಜದ ಜನರು ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಯುವ ಪೀಳಿಗೆಯಲ್ಲಿನ ಪ್ರತಿಭೆಗಳು ಅವಕಾಶವಿಲ್ಲದೇ ಒಂದು ಹಂತದಲ್ಲಿ ಕುಂದುತ್ತಿದೆ ಎಂದರು.


  ಮುಖ್ಯ ಅತಿಥಿಯಾಗಿದ್ದ ಗಾನಕೋಗಿಲೆ ಹಾಗೂ ಹಿರಿಯ ಯಕ್ಷಗಾನ ಭಾಗವತರಾದ ಕೊಳಗಿ ಕೇಶವ ಹೆಗಡೆಯವರು ಮಾತನಾಡಿ ಇಂದಿನ ಪೀಳಿಗೆ ಸರಿಯಾಗಿ ಅಧ್ಯಯನ ನಡೆಸುವುದಿಲ್ಲ ಬದಲಾಗಿ ಕಲಿತ ಒಂದೆರಡು ಕಲೆಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಅನುಭವಿ ಕಲಾವಿದರೆಂದು ಮೆರೆಯುತ್ತಾರೆ. ಇದರಿಂದ ಮೂಲ ಕಲೆಯ ಮಹತ್ವವೇ ನಶಿಸುತ್ತಿದೆ ಅದರೊಂದಿಗೆ ಇನ್‍ಪ್ಲೆಸ್ ಮೂಲಕ ಪ್ರಶಸ್ತಿ ಪುರಸ್ಕಾರಕ್ಕೆಂದು ಮುಗಿಬೀಳುವ ಯುವಕಲಾವಿದರ ಯೋಚನೆ ಖೇದವಾಗಿದೆ. ಬದಲಾಗಿ ಪ್ರತಿಯೊಂದು ಕಲೆಯನ್ನು ಆಳವಾಗಿ ಅಭ್ಯಸಿಸಬೇಕು ಮತ್ತು ಅನುಭವಿ ಕಲಾವಿದರಿಂದ ಕಲೆಕುರಿತಾಗಿ ಸರಿಯಾಗಿ ಮಾರ್ಗದರ್ಶನ ಮಾಡಿಸಿಕೊಳ್ಳುವಂತಾಗಬೇಕು ಆಗಲೇ ಆಯಾ ಕಲೆಯ ಮಹತ್ವ ಹಾಗೂ ಅದರ ಶಿಸ್ತು ಬದ್ಧತೆಗಳು ನಿರಂತರವಾಗಿ ಉಳಿಯುತ್ತದೆ ಎಂದರು.

  300x250 AD


  ಅತಿಥಿಗಳಾಗಿದ್ದ ಸಾಮಾಜಿಕ ಕಾರ್ಯಕರ್ತ ಉಮೇಶ ಜಿ ಭಟ್ಟ ವರ್ಗಾಸರ, ಭಾಗತವ ಸತೀಶ ದಂಟ್ಕಲ್, ತಾಳಮದ್ದಲೆ ಅರ್ಥದಾರಿ ಸುಬ್ರಾಯ ಕೆರೆಕೊಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ನಾದ ಶಂಕರ ಸಂಸ್ಥೆಯ ಮುಖ್ಯಸ್ಥ ಹಾಗೂ ಹಿರಿಯ ಮದ್ದಲೆ ವಾದಕರೂ ಆದ ಶಂಕರ ಭಾಗವತ ಯಲ್ಲಾಪುರರವರು ಕಳೆದ 8 ವರ್ಷಗಳಿಂದ ಸಂಸ್ಥೆ ನಡೆದು ಬಂದದಾರಿ ಹಾಗೂ ಸಂಸ್ಥೆಯಿಂದ ಕಲೆ ಕುರಿತು ಮಾರ್ಗದರ್ಶಿಸಿದ ಕೆಲಸ ಕಾರ್ಯದ ಕುರಿತಾಗಿ ವಿವರಿಸಿದರು.


  ಬೆಣ್ಣೆಮನೆ ಶ್ರೀಧರ ಜಿ ಹೆಗಡೆ ಸ್ವಾಗತಿಸಿದರು, ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ತದ ನಂತರದಲ್ಲಿ ‘ಶರ ಸೇತು ಬಂಧನ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

  Share This
  300x250 AD
  300x250 AD
  300x250 AD
  Back to top