ಕಾರವಾರ: ಜಿಲ್ಲೆಯಲ್ಲಿ ಅ.27 ಬುಧವಾರ ಶೇ. 0.49 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಲ್ಪಟ್ಟಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಂತೆ ಕಳೆದ ಎರಡು ದಿನದ ಅವಧಿಯ ಮಂಗಳವಾರ ಶೇ.0. 39 ಹಾಗೂ ಸೋಮವಾರ ಶೇ. 0.49 ರಷ್ಟು ಪಾಸಿಟಿವಿಟಿ ದಾಖಲಾಗಿತ್ತು. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಸಾವಿನ ಪ್ರಮಾಣ ಕೂಡ ಕಡಿಮೆಯಾಗುತ್ತಿದ್ದು, ಜನತೆಗೆ ಸ್ವಲ್ಪ ಸಮಾಧಾನದ ಸಂಗತಿಯಾಗಿದೆ.