• Slide
  Slide
  Slide
  previous arrow
  next arrow
 • ಹಾನಗಲ್ ಉಪಚುನಾವಣೆ; ಕಾಂಗ್ರೆಸ್ ಅಬ್ಯರ್ಥಿ ಪರ ಮತಯಾಚಿಸಿದ ಘೋಟ್ನೇಕರ

  300x250 AD

  ಶಿರಸಿ: ಮರಾಠಿಗರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಬಿಜೆಪಿಯವರು ಮರಾಠರಿಗೆ ಮೋಸ ಮಾಡಿದ್ದಾರೆ. ಹಾಗಾಗಿ ಈ ಉಪಚುನಾವಣೆಯಲ್ಲಿ ಮರಾಠಿಗರು ಕಾಂಗ್ರೆಸ್‍ಗೆ ಮತ ನೀಡಿ ನಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ. ಹಾಗಾಗಿ ಹಾನಗಲ್‍ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಇವರಿಗೆ ಮತವನ್ನು ನೀಡಬೇಕೆಂದು ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಶಿರಸಿ ಕೆ.ಡಿ.ಸಿ.ಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ, ನಿರ್ದೇಶಕ ಶ್ರೀಕಾಂತ ಘೋಟ್ನೇಕರ ವಿನಂತಿಸಿದ್ದಾರೆ ಎಂದು ಜಿಲ್ಲಾ ಮರಾಠ ಸಮುದಾದ ಮುಖಂಡ ಪಾಂಡುರಂಗ ವಿ ಪಾಟೀಲ್ ತಿಳಿಸಿದ್ದಾರೆ.


  ಅವರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಭಾ ಕ್ಷೇತ್ರ ವ್ಯಾಪ್ತಿಯ ಆಡೂರು, ಚೆನ್ನಾಪುರ, ಬೆಳೆಗಾಲಪೇಟ್, ಆರೆಲಕ್ನಾಪುರ ಮುಂತಾದ ಗ್ರಾಮಗಳಲ್ಲಿ ಸಂಚರಿಸಿ ಕಾಂಗ್ರೆಸ್ ಪರವಾಗಿ ಭಾರಿ ಪ್ರಚಾರದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಹಳಿಯಾಳ, ಮುಂಡಗೋಡದಲ್ಲಿ ಬಿ.ಜೆ.ಪಿ ಪರಿವರ್ತನೆ ಯಾತ್ರೆಯು 16-11- 2017 ರಂದು ನಡೆಯಿತು. ಈ ರ್ಯಾಲಿಯಲ್ಲಿ ಬಿಜೆಪಿಯ ರಾಜ ನಾಯಕ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹಿಂದುಳಿದ ಆಯೋಗದ ಅಧ್ಯಕ್ಷ ಎನ್ ಶಂಕ್ರಪ್ಪನವರ ವರದಿಯಂತೆ ಪ್ರಸ್ತುತ 3-ಬಿ ಯಲ್ಲಿರುವ ಮರಾಠಿಗರನ್ನು ಹಾಗೂ ಆ ಸಮುದಾಯದ ಉಪಪಂಗಡದವರನ್ನು 2ಎ ಗೆ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನು ಅಧಿಕಾರಕ್ಕೆ ಬಂದು ಇಲ್ಲಿಯವರೆಗೂ ಸಹ ಈಡೇರಿಸಿಲ್ಲ.

  300x250 AD


  ಜಿಲ್ಲೆಯ ಮರಾಠಾ ಸಮುದಾಯದ ಮುಖಂಡ ಪಾಂಡುರಂಗ ಪಾಟೀಲ್‍ರವರು ಮಾಜಿ ಸಚಿವ ಸಿ.ಎಂ ಉದಾಸಿಯವರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ರಚನೆಯಾಗಲು ಕಾರಣದೂತರು. ಅವರ ನಿಧನದಿಂದ ಹಾನಗಲ್ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ. ಉದಾಸಿ ಕುಟುಂಬದವರಿಗೆ ಅನುಕಂಪದಿಂದ ಬಿಜೆಪಿಯವರು ಟಿಕೇಟ ನೀಡಬೇಕಾಗಿತ್ತು. ಅವರಿಗೆ ಟಿಕೇಟ ನೀಡದೇ ಬಿಜೆಪಿಯಿಂದ ಉದಾಸಿ ಕುಟುಂಬದವರಿಗೆ ಅನ್ಯಾಯವಾಗಿದೆ. ಅವರಿಗೆ ಅನ್ಯಾಯ ಮಾಡಿರುವ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕಾದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೀನಿವಾಸ ಮಾನೆಯವರಿಗೆ ಮತ ಚಲಾಯಿಸಬೇಕು ಎಂದು ಜಿಲ್ಲಾ ಮರಾಠ ಸಮುದಾದ ಮುಖಂಡ ಪಾಂಡುರಂಗ ವಿ ಪಾಟೀಲ್ ಹೇಳಿದ್ದಾರೆ.


  ಘೋಟ್ನೇಕರರಿಂದ ಹಾಗೂ ಸಿಂಧ್ಯಾರವರಿಂದ ಅ.27 ರಂದು ಹಾನಗಲ್ ತಾಲೂಕಿನಲ್ಲಿ ಮರಾಠ ಸಮುದಾಯದ ರಾಜ್ಯ ನಾಯಕರಾದ ಮಾಜಿ ಸಚಿವ ಪಿ.ಜಿ..ಆರ್. ಸಿಂಧ್ಯಾ ಹಾಗೂ ಜಿಲ್ಲೆಯ ಮರಾಠ ಸಮುದಾಯದ ನಾಯಕ ಶ್ರೀಕಾಂತ ಘೋಟ್ನೇಕರರಿಂದ ಹಾನಗಲ್ ತಾಲೂಕಿನಾದ್ಯಂತ ಪ್ರಚಾರವನ್ನು ಕೈಗೊಳ್ಳಲಿದ್ದಾರೆ ಎಂದು ಹಾಗೂ ಅದೇ ರೀತಿ ಶಿರಸಿಯ ಕಾಂಗ್ರೆಸ್ ಮುಖಂಡರಾದ ಸುಷ್ಮಾ ರಾಜಗೋಪಾಲ ರೆಡ್ಡಿ ಅವರೂ ಸಹ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀನಿವಾಸ ಮಾನೆಯವರ ಪರ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಮರಾಠ ಸಮುದಾದ ಮುಖಂಡ ಪಾಂಡುರಂಗ ವಿ ಪಾಟೀಲ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top