ಯಲ್ಲಾಪುರ: ಜುಲೈ 2021 ನೇ ಮಾಹೆಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪೆÇ್ರೀತ್ಸಾಹ ಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಖಾತೆಗೆ ಅ.26 ಮಂಗಳವಾರ ಜಮಾ ಆಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಶಂಕರ ಹೆಗಡೆ ಜಂಬೆಕೊಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೆ.2021 ರ ವರೆಗಿನ ಪೆÇ್ರೀತ್ಸಾಹ ಧನದ ಮಾಹಿತಿಯನ್ನು ಈಗಾಗಲೇ ಕ್ಷೀರಸಿರಿ ತಂತ್ರಾಶದಲ್ಲಿ ಅಳವಡಿಸಲಾಗಿದ್ದು, ಜುಲೈ.2021 ರ ವರೆಗೆ ಸರ್ಕಾರದಿಂದ ಅತ್ಯಂತ ತ್ವರಿತವಾಗಿ ಪೆÇ್ರೀತ್ಸಾಹ ಧನವನ್ನು ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಇದರಿಂದ ಜಿಲ್ಲೆಯ ಎಲ್ಲ ಹಾಲು ಉತ್ಪಾದಕ ರೈತರಿಗೆ ಸಹಾಯವಾಗಿದೆ ಎಂದರು. ಹಾಗೂ ಪೆÇ್ರೀತ್ಸಾಹ ಧನ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದ್ದಾರೆ.