• first
    second
    third
    previous arrow
    next arrow
  • ರುಚಿಕರವಾದ ಖರ್ಜೂರದ ಪಾಯಸ ಮಾಡಿ ಸವಿದು ನೋಡಿ

    300x250 AD

    ಅಡುಗೆ ಮನೆ: ಬೇಕಾಗುವ ಸಾಮಗ್ರಿ: ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿಕೊಂಡ ಖರ್ಜೂರ- 2 ಕಪ್, ರವೆ- 2 ಟೇಬಲ್ ಸ್ಪೂನ್, ತೆಂಗಿನಕಾಯಿ ಹಾಲು- 3/4 ಕಪ್, ತುಪ್ಪ – 2 ಟೀ ಸ್ಪೂನ್, ಗೋಡಂಬಿ- 3ರಿಂದ 4, ಏಲಕ್ಕಿ ಪುಡಿ- ಚಿಟಿಕೆ

    300x250 AD

    ಮಾಡುವ ವಿಧಾನ: ಕತ್ತರಿಸಿದ ಖರ್ಜೂರವನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಗೋಡಂಬಿ ಚೂರು ಹಾಕಿ ಫ್ರೈ ಮಾಡಿ. ಹಾಗೇ ರವೆ ಕೂಡ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ, ಇದಕ್ಕೆ 1 ಕಪ್ ನಷ್ಟು ಬಿಸಿ ನೀರು ಹಾಕಿ ರವೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಖರ್ಜೂರದ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ, ಕೊನೆಗೆ ತೆಂಗಿನಕಾಯಿ ಹಾಲು ಹಾಕಿ ಸ್ವಲ್ಪ ಕುದಿ ಬರುವ ತನಕ ಹಾಗೇ ಇಟ್ಟು ನಂತರ ಗ್ಯಾಸ್ ಆಫ್ ಮಾಡಿದರೆ ರುಚಿ-ರುಚಿಯಾದ ಪಾಯಸ ಸವಿಲು ಸಿದ್ದ.

    Share This
    300x250 AD
    300x250 AD
    300x250 AD
    Back to top