• first
  second
  third
  previous arrow
  next arrow
 • ಕಾಲಕ್ಕನುಗುಣ ಸಾಹಿತ್ಯದ ಗುಣಧರ್ಮ ಬದಲಾಗುತ್ತಿದೆ; ಭಾಗೀರಥಿ ಹೆಗಡೆ

  300x250 AD


  ಶಿರಸಿ: ಆಯಾ ಕಾಲಕ್ಕನುಗುಣವಾಗಿ ಸಾಹಿತ್ಯ ಮತ್ತು ಸಾಹಿತಿಗಳ ಗುಣಧರ್ಮ ಬದಲಾವಣೆ ಕಾಣುತ್ತಿದೆ. ಸಾಧನೆಗೆ ಕೊನೆಯೆಂಬುದಿಲ್ಲ. ಸೋಲನ್ನು ಯಶಸ್ಸಿನ ಮೆಟ್ಟಿಲನ್ನಾಗಿಸಿಕೊಂಡವ ಸಾಧನೆಯ ಶಿಖರವೇರುತ್ತಾನೆ ಎಂದು ಹಿರಿಯ ಬರಹಗಾರ್ತಿ ಭಾಗೀರಥಿ ಹೆಗಡೆ ಹೇಳಿದರು.


  ಅವರು ಶಿರಸಿಯ ವಿವೇಕಾನಂದ ನಗರದ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನಡೆದ ಕವಯತ್ರಿ ವಿಮಲಾ ಭಾಗ್ವತ್ ರ ‘ಕಲರವ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಈ ರೀತಿಯಾಗಿ ಅಭಿಪ್ರಾಯಪಟ್ಟರು.


  ನಮ್ಮ ಅನುಭವವೇ ನಮಗೆ ಕಾವ್ಯವಾಗಿ ಪರಿಣಮಿಸಬೇಕು. ಮಧ್ಯಮ ವಯಸ್ಸಿನಲ್ಲಿ ಬರೆದ ಸಾಹಿತ್ಯ ಅನುಭವಭರಿತವಾಗಿರುತ್ತವೆ. ಅವು ಪರಿಪಕ್ವಗೊಂಡಿರುತ್ತದೆ. ಕಾವ್ಯಧರ್ಮವನ್ನು ಅಳವಡಿಸಿಕೊಂಡ ಕವಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ, ಎಂದು ಜನಮಾದ್ಯಮ ಪತ್ರಿಕೆ ಸಂಪಾದಕ ಅಶೋಕ ಹಾಸ್ಯಗಾರವರು ಸಮಾರಂಭವನ್ನು ಉದ್ಘಾಟಿಸಿ ಈ ರೀತಿಯಾಗಿ ಹೇಳಿದರು.

  ಕೃತಿ ಪರಿಚಯ ಮಾಡಿದ ಚುಟುಕು ಕವಿ ದತ್ತಗುರು ಕಂಠಿ ಮಾತನ್ನಾಡಿ, ಸಾಹಿತ್ಯದ ಸಾಂಗತ್ಯದಿಂದಾಗಿ ಕವಿಯತ್ರಿ ಒಂಟಿತನದಿಂದ ವಿಮುಕ್ತರಾಗಿದ್ದಾರೆ. ಭಾವಗೀತೆ, ಭಕ್ತಿಗೀತೆ, ಚುಟುಕು, ಜಡೆಗವನ, ಹನಿಗವನ, ಗಝಲ್, ಮುಕ್ತಕ, ಷಟ್ಪದಿ ಹೀಗೆ ಸಾಹಿತ್ಯದ ಸರ್ವಪ್ರಾಕಾರಗಳಲ್ಲಿಯೂ ಕೈಯಾಡಿಸಿ ಯಶಸ್ವಿಯಾದವರು. ವಾಟ್ಸಾಪ್ ಬಳಗದಲ್ಲಿ ನಿತ್ಯ ಬರವಣಿಗೆ ರೂಢಿಸಿಕೊಂಡಿದ್ದು ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದು ಹೆಮ್ಮೆಯ ಸಂಗತಿ, ಎಂದರು.

  ವ್ಯಕ್ತಿಯೊಬ್ಬನ ಸಂಸ್ಕೃತಿ, ಸಂಸ್ಕಾರವು ಆತ ರಚಿಸಿದ ಸಾಹಿತ್ಯ ಮೇಲೆ ಪರಿಣಾವನ್ನುಂಟು ಮಾಡುತ್ತದೆ ಎಂದು ಗಣಪತಿ ಭಟ್ ವರ್ಗಾಸರ ಹೇಳಿದರು.

  300x250 AD

  ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಸಾಹಿತಿ ಎಸ್.ಎಸ್.ಭಟ್ ಮಾತನಾಡಿ, ಸಂಗೀತ ಮತ್ತು ಸಾಹಿತ್ಯ ವಿಮಲಾ ಭಾಗ್ವತರ ಜೀವನೋತ್ಸಾಹದ ಗುಟ್ಟು. ಅವರ ಪ್ರಯತ್ನಶೀಲತೆಗೆ ಸೃಜನಶೀಲತೆ ಪೂರಕವಾಗಿ ಕೆಲಸ ಮಾಡುತ್ತಿವೆ, ಎಂದರು. ಕಥೆಗಾರ ಡಿ.ಎಸ್. ನಾಯ್ಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

  ಈ ಸಂದರ್ಭದಲ್ಲಿ ಕೃತಿಕಾರಿಣಿ ವಿಮಲಾ ಭಾಗ್ವತರು ತಮ್ಮದೇ ಕೃತಿಯಲ್ಲಿರುವ ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇದಕ್ಕೆ ಗೀತಾ ಜೋಷಿ ಹಾರ್ಮೋನಿಯಂ ಹಾಗೂ ಸನತ್ ರಾವ್ ತಬಲಾ ಸಾಥ್ ನೀಡಿದರು.


  ಆರಂಭದಲ್ಲಿ ಭಾರತಿ ಹೆಗಡೆ ಪ್ರಾರ್ಥನಾಗೀತೆ ಹಾಡಿದರು. ಪ್ರತಿಭಾ ನಾಯ್ಕ ಸ್ವಾಗತಿಸಿದರು. ವಿಜಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಾವಿತ್ರಿ ಶಾಸ್ತ್ರಿ ವಂದಿಸಿದರು.

  Share This
  300x250 AD
  300x250 AD
  300x250 AD
  Back to top