• first
    second
    third
    previous arrow
    next arrow
  • ಡೀಸೆಲ್-ಪೆಟ್ರೋಲ್ ಕಳ್ಳತನ; ನಾಲ್ವರು ಆರೋಪಿಗಳ ಬಂಧನ

    300x250 AD

    ಹಳಿಯಾಳ: ರಾಮನಗರ ಮತ್ತು ಸುತ್ತಮುತ್ತ ನಿಲ್ಲಿಸಿದ್ದ ವಾಹನದಿಂದ ಡೀಸೆಲ್ ಮತ್ತು ಪೆಟ್ರೋಲ್ ಕದಿಯುತ್ತಿದ್ದ ನಾಲ್ವರನ್ನು ಸ್ಥಳೀಯರು ಸೋಮವಾರ ಬೆಳಗ್ಗೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    300x250 AD


    ಕಳೆದ ಕೆಲವು ತಿಂಗಳುಗಳಿಂದ, ರಾಮನಗರ ಪ್ರದೇಶದಲ್ಲಿ ಮತ್ತು ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ ವಾಹನಗಳಿಂದ ಡೀಸೆಲ್ ಮತ್ತು ಪೆಟ್ರೋಲ್ ಕಳ್ಳತನದ ಘಟನೆಗಳು ನಡೆದಿವೆ. ಹಾಗಾಗಿ ಚಾಲಕರು ತೊಂದರೆಗೆ ಸಿಲುಕಿದ್ದರು. ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಕಳ್ಳತನವಾಗುತ್ತಿದ್ದರಿಂದ ಆಕ್ರೋಶಗೊಂಡ ಸ್ಥಳೀಯ ವಾಹನ ಸವಾರರು ನಿನ್ನೆ ರಾತ್ರಿ ಗಸ್ತು ತಿರುಗಿ ಕಳ್ಳರ ಮೇಲೆ ಕಣ್ಣಿಟ್ಟಿದ್ದಾರೆ. ಮಧ್ಯರಾತ್ರಿಯ ನಂತರ ಬೆಳಗಿನಜಾವ ೨ ಗಂಟೆ ಸುಮಾರಿಗೆ ನಾಲ್ವರು ಕಳ್ಳರು ಡೀಸೆಲ್ ತೆಗೆಯುತ್ತಿರುವುದನ್ನು ಸ್ಥಳೀಯರು ಕಂಡು ಸ್ಥಳೀಯರು ಕಳ್ಳರನ್ನ ಹಿಡಿದು ರಾಮನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಲ್ಲಿ ಮಿನಿಡ್, ಗುರು, ಮಂಗೇಶ್, ಧರಣೇಶ್ ಎಂಬ ಯುವಕರು ಸೇರಿದ್ದಾರೆ ಎಂದು ತಿಳಿದು ಬಂದಿದ್ದು, ರಾಮನಗರ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Back to top