• first
    second
    third
    previous arrow
    next arrow
  • ಪೊಲೀಸರ ಭರ್ಜರಿ ಕಾರ್ಯಾಚರಣೆ; 5ಕೋಟಿ ಮೌಲ್ಯದ ತಿಮಿಂಗಲದ ವಾಂತಿ ವಶಕ್ಕೆ

    300x250 AD

    ಶಿರಸಿ: ಸೋಮವಾರ ತಡರಾತ್ರಿ ಮರಾಠಿಕೊಪ್ಪದಲ್ಲಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬಹು ಬೇಡಿಕೆಯ, ಬೆಲೆಬಾಳುವ ಅಂದಾಜು 5ಕೋಟಿ ರೂ.ಮೌಲ್ಯದ 4.950 ಕೆ.ಜಿ.ತೂಕದ ಅಂಬರ್ ಗ್ರೀಸ್(ತಿಮಿಂಗಲದ ವಾಂತಿ)ಯನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಸಿದ್ದಾರೆ.

    ಖಚಿತ ಮಾಹಿತಿಯ ಮೇರೆಗೆ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ 5 ಕೋಟಿ ರೂ.ಮೌಲ್ಯದ 4.950 ಕೆ.ಜಿ.ಅಂಬರ್ ಗ್ರೀಸ್, 10 ಲಕ್ಷ ರೂ. ಮೌಲ್ಯದ 100 ಗ್ರಾಂ ಅಂಬರ್ ಗ್ರೀಸ್ ನಂತಹ ವಸ್ತು 1.5ಲಕ್ಷ ರೂ.ಮೌಲ್ಯದ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿಗಳಾದ ಅಂಕೋಲಾ ಆವರ್ಸಾದ ಸಂತೋಷ ಬಾಲಚಂದ್ರ ಕಾಮತ್ ಹಾಗೂ ಶಿರಸಿ ಮರಾಠಿಕೊಪ್ಪದ ರಾಜೇಶ ಮಂಜುನಾಥ ನಾಯ್ಕನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಹಾವೇರಿಯ ಅನ್ನಪೂರ್ಣ ಎನ್ನುವವರನ್ನು ಬಂಧಿಸಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    300x250 AD

    ಏನಿದು ಅಂಬರ್ ಗ್ರೀಸ್?:
    ಇಂಗ್ಲೀಷ್ ನಲ್ಲಿ ಅಂಬರ್ ಗ್ರೀಸ್ ಎಂದೂ ಕನ್ನಡದಲ್ಲಿ ತಿಮಿಂಗಲದ ವಾಂತಿ ಎಂದು ಕರೆಸಿಕೊಳ್ಳುವ ವಸ್ತು ತಿಮಿಂಗಲದಿಂದ ಉತ್ಪನ್ನವಾಗುತ್ತದೆ. ಮೀನುಗಳನ್ನು ಬೇಟೆಯಾಡುವ ತಿಮಿಂಗಲಗಳು ಕೆಲವು ಮೀನುಗಳ ಎಲುಬುಗಳು ಜೀರ್ಣವಾಗದೆ ಅವುಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ತಿಂಗಳುಗಟ್ಟಲೆ ಇದನ್ನು ಸಹಿಸಿಕೊಳ್ಳುವ ತಿಮಿಂಗಲಗಳು ನಂತರ ತಡೆಯಲಾರದೆ ವಾಂತಿ ಮಾಡುತ್ತವೆ. ತಿಮಿಂಗಲದ ಹೊಟ್ಟೆಯಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಿಂದ ಈ ಆಹಾರಗಳು ಮೇಣದಂತೆ ಗಟ್ಟಿಯಾಗಿ ಹೊರಬರುತ್ತದೆ ಇದನ್ನೆ ಅಂಬರ್ ಗ್ರೀಸ್ ಎನ್ನುತ್ತಾರೆ.

    ಎಲ್ಲ ತಿಮಿಂಗಲಗಳ ವಾಂತಿಗಳು ಮೌಲ್ಯವನ್ನು ಹೊಂದಿರುವುದಿಲ್ಲ. ಸ್ಟೇರ್ವವೆಲ್ ಪ್ರಭೇದದ ತಿಮಿಂಗಲಗಳ ಅಂಬರ್ ಗ್ರೀಸ್ ಬೆಲೆ ಬಾಳುವಂತಹದ್ದು. ಸುಗಂಧ ದ್ರವ್ಯ ತಯಾರಿಕೆಯಲ್ಲಿ ಕೆಲವು ಔಷಧಗಳ ತಯಾರಿಕೆಯಲ್ಲಿ ಇವುಗಳನ್ನು ಬಳಸಲಾಗುತ್ತದೆ. ಅರಬ್ ಮತ್ತು ಚೀನಾದಂತಹ ಹಲವು ದೇಶಗಳಲ್ಲಿ ಈ ವಸ್ತುವಿಗೆ ಅಪಾರ ಬೇಡಿಕೆ ಇದೆ ಹಾಗೂ ಬಹಳ ಮೌಲ್ಯವೂ ಇದೆ.

    Share This
    300x250 AD
    300x250 AD
    300x250 AD
    Back to top