ಶಿರಸಿ: ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯ ವತಿಯಿಂದ ಅ.25 ಸೋಮವಾರ ದಾಸನಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಹಸಿ ಅಡಿಕೆ ಟೆಂಡರ್ ವ್ಯವಸ್ಥೆ ಪ್ರಾರಂಭಿಸಲಾಯಿತು.
ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಸಿ.ಎನ್. ಹೆಗಡೆ ಹೂಡ್ಲಮನೆ, ಎಸ್.ಎಮ್. ಹೆಗಡೆ ನೀರ್ನಳ್ಳಿ, ಕೆ.ಎಮ್. ಹೆಗಡೆ ಹೀಪ್ನಳ್ಳಿ, ಎಸ್.ವಿ. ಭಟ್ಟ ಸಾಲ್ಕಣಿ ಹಾಗೂ ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಗಳಾದ ವಿಜಯಲಕ್ಷ್ಮೀಯವರು ವ್ಯಾಪಾರಸ್ಥರಿಗೆ ಟೆಂಡರ್ ಫಾರ್ಮ್ ನೀಡುವುದರ ಮೂಲಕ ಹಸಿ ಅಡಿಕೆ ಟೆಂಡರ್ ವ್ಯವಸ್ಥೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿವ್ಯಾಪಾರಸ್ಥರು, ಸದಸ್ಯರು, ರೈತರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ದಾಸನಕೊಪ್ಪದಲ್ಲಿ ಹಸಿ ಅಡಿಕೆ ಟೆಂಡರ್ ಪ್ರಕ್ರಿಯೆ ಪ್ರತಿ ದಿನ ನಡೆಸುವ ಮೂಲಕ ಪ್ರತಿ ದಿನ ಮಾರಾಟ ವ್ಯವಸ್ಥೆ ಒದಗಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.