• first
    second
    third
    previous arrow
    next arrow
  • 1-5ನೇ ತರಗತಿ ಆರಂಭ: 18 ತಿಂಗಳ ನಂತರ ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

    300x250 AD

    ಶಿರಸಿ: ಕರೋನಾ ಹಿನ್ನೆಲೆಯಲ್ಲಿ 18 ತಿಂಗಳಿಂದ ಶಾಲೆಯಿಂದ ದೂರ ಉಳಿದಿದ್ದ ಮಕ್ಕಳು ಸೋಮವಾರ ಶಾಲೆಯತ್ತ ಹೆಜ್ಜೆ ಹಾಕಿದರು.

    300x250 AD


    ಸೋಮವಾರದಿಂದ 1-5ನೇ ತರಗತಿಗಳು ಆರಂಭವಾಗಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ದಿನ 66.37% ತರಗತಿಗೆ ಹಾಜರಾಗಿದ್ದರು. ಶಿರಸಿ ತಾಲೂಕಿನ 13,187 ವಿದ್ಯಾರ್ಥಿಗಳಲ್ಲಿ 12,054 ಮಕ್ಕಳು ಹಾಜರಾಗಿದ್ದರು. ಸಿದ್ದಾಪುರ ತಾಲೂಕಿನ 6,247 ವಿದ್ಯಾರ್ಥಿಗಳಲ್ಲಿ 4,457 ಮಕ್ಕಳು ಹಾಜರಿದ್ದರು. ಯಲ್ಲಾಪುರ ತಾಲೂಕಿನ 6,024 ನೊಂದಾಯಿತ ವಿದ್ಯಾರ್ಥಿಗಳ ಪೈಕಿ 4,879, ಮುಂಡಗೋಡ ತಾಲೂಕಿನ 9,241 ವಿದ್ಯಾರ್ಥಿಗಳಲ್ಲಿ 5,579, ಹಳಿಯಾಳ ತಾಲೂಕಿನ 16,263 ಮಕ್ಕಳಲ್ಲಿ 7,159 ಹಾಗೂ ಜೊಯಿಡಾ ತಾಲೂಕಿನ 4,103 ವಿದ್ಯಾರ್ಥಿಗಳ ಪೈಕಿ 3,520 ಮಕ್ಕಳು ತರಗತಿಗೆ ಹಾಜರಾಗಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ. ಮತ್ತೆ ಶಾಲೆ ಆರಂಭವಾಗಿದ್ದರಿಂದ ಶಾಲೆಗಳಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಿದೆ.

    Share This
    300x250 AD
    300x250 AD
    300x250 AD
    Back to top