• first
  second
  third
  previous arrow
  next arrow
 • ಬದನಗೋಡಿನಲ್ಲಿ ಸಾರ್ವಜನಿಕ ಕುಂದು-ಕೊರತೆ ಸಭೆ ನಡೆಸಿ; ಸಹಾಯಕ ಆಯುಕ್ತರಿಗೆ ಮನವಿ

  300x250 AD

  ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ, ವ್ಯಾಪ್ತಿಯಲ್ಲಿ ಅನೇಕ ಸಾರ್ವಜನಿಕ ಕುಂದು-ಕೊರತೆಗಳು ಇದ್ದು ಆ ಕಾರಣ ಈ ಪಂಚಾಯತ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ನಡೆಸಬೇಕೆಂದು ಬದನಗೋಡ ಗ್ರಾ.ಪಂ ವ್ಯಾತಿಯ ಸಾರ್ವಜನಿಕರ ಪರವಾಗಿ ಯುವರಾಜ ಜೆ ಗೌಡ ಅವರು ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್ ಅವರಿಗ ಮನವಿ ಸಲ್ಲಿಸಿದರು.

  300x250 AD


  ಬದನಗೋಡ ಪಂಚಾಯತ ತಾಲೂಕಿಗೆ ಅತಿ ದೊಡ್ಡ ಪಂಚಾಯತ ಆಗಿದ್ದು, ಈ ಪಂಚಾಯತ ವ್ಯಾಪ್ತಿಯಲ್ಲಿ 7 ಗ್ರಾಮಗಳು 5 ಮಜರೆಗಳು ಬರುತ್ತಿದ್ದು, ಒಟ್ಟು ಜನಸಂಖ್ಯೆ ಅಂದಾಜು 11500 ಇದ್ದು, ಈ ಪಂಚಾಯತ ವ್ಯಾಪ್ತಿಯಲ್ಲಿ ಅನೇಕ ಸಾರ್ವಜನಿಕ ಕುಂದು ಕೊರತೆಗಳು ಇದ್ದು ಆ ಕಾರಣ ಈ ಪಂಚಾಯತ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ನಡೆಸುವಂತೆ 2018 ರಿಂದ ಮನವಿ ಸಲ್ಲಿಸುತ್ತಾ ಬಂದಿರುತ್ತೇನೆ. ಆದರೆ ಇತ್ತೀಚಿನ ವರ್ಷದಲ್ಲಿ ಕೋವಿಡ 19 ಇರುವುದರಿಂದ ಕುಂದು ಕೊರತೆ ಸಭೆಗಳನ್ನ ಸರ್ಕಾರ ರದ್ದುಗೊಳಿಸಿತ್ತು. ಇತ್ತೀಚಿಗೆ ಕೊಪಿಡ್ ಸೋಂಕಿನ ಪ್ರಮಾಣ ಕಡಿಮೆ ಆಗಿರುವುದರಿಂದ ಕುಂದು ಕೊರತೆ, ಗ್ರಾಮ ವಾಸ್ತವ್ಯಕ್ಕೆ ಸರಕಾರ ಮರುಚಾಲನೆ ನೀಡಿದ್ದು, ಆ ಕಾರಣ ತಾವು ಶಿರಸಿ ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತ ಆಗಿರುವ ಬದನಗೋಡ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆಯನ್ನು ನಡೆಸಿ, ಈ ಭಾಗದಲ್ಲಿ ಅನೇಕ ವರ್ಷಗಳಿಂದ ಹಾಗೆ ಉಳಿದಿರುವ ಸಾರ್ವಜನಿಕ ಬೇಡಿಕೆಗಳನ್ನು ಇಡೆರಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.

  Share This
  300x250 AD
  300x250 AD
  300x250 AD
  Back to top