ಶಿರಸಿ: ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಸಹಕಾರ ಚಳುವಳಿ ನಡೆಸಲು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತೀರ್ಮಾನಿಸಿದ್ದು, ಅವರು ಇಂದು ನಗರದ ಡಿಡಿಪಿಐ ಕಚೇರಿ ಎದುರು ಸೇರಿದ ಶಿಕ್ಷಕರು ಡಿಡಿಪಿಐ’ಗೆ ಮನವಿ ಸಲ್ಲಿಸಿದರು.
ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ತಿದ್ದುಪಡಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಈಗಾಗಲೇ ಒತ್ತಾಯಿಸಲಾಗಿತ್ತು. ಆದರೆ ಸರ್ಕಾರ ಸ್ಪಂದಿಸದ ಕಾರಣಕ್ಕೆ ಮಕ್ಕಳೊಂದಿಗೆ ಇದ್ದು ಅಸಹಕಾರ ನೀಡುವ ಮೂಲಕ ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದರು.
30-10 ರಿಂದ 10-11 ರ ವರೆಗೆ ಮಧ್ಯಾಹ್ನ ಬಿಸಿಯೂಟ ಮಾಹಿತಿಯನ್ನು ಅಪ್ ಲೋಡ್ ಮಾಡದೆ ಇರುವುದು. 30-10 ರಿಂದ 18-10 ರ ವರೆಗೆ ಸ್ಯಾಟ್ಸ್ ಮಾಹಿತಿ ಅಪ್ ಲೋಡ್ ಮಾಡದಿರಲು ನಿರ್ಧರಿಸಿದ್ದೇವೆ. ರಾಜ್ಯ ಹಂತದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿರುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.
ನಮ್ಮ ಅಸಹಕಾರ ಹೋರಾಟಕ್ಕೂ ಬಗ್ಗದಿದ್ದಲ್ಲಿ ತರಗತಿ ಬಷ್ಕಾರದ ಮೂಲಕ ಅಂತಿಮ ಹೋರಾಟಕ್ಕೂ ಸಿದ್ದರಿದ್ದು, ಸರ್ಕಾರ ಇದಕ್ಕೆ ಅವಕಾಶ ನೀಡದೆ ಬೇಡಿಕೆ ಈಡೇರಿಸಬೇಕೆಂದು ಸಂಘದ ಅಧ್ಯಕ್ಷ ನಾರಾಯಣ ಎಚ್. ನಾಯಕ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಪಟಗಾರ ಸೇರಿದಂತೆ ಅನೇಕರು ಇದ್ದರು.