• first
    second
    third
    previous arrow
    next arrow
  • ಕಾರ್-ಬೈಕ್ ನಡುವೆ ಡಿಕ್ಕಿ; ಸವಾರರಿಗೆ ಗಂಭೀರ ಗಾಯ

    300x250 AD

    ಹೊನ್ನಾವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 69 ರ ಗೇರುಸೊಪ್ಪಾ ಮಾಸ್ತಿಮನೆ ಬಳಿಯಲ್ಲಿ ಕಾರ್-ಬೈಕ್ ನಡುವೆ ಡಿಕ್ಕಿಯಾಗಿ ಸವಾರರು ಗಾಯಗೊಂಡ ಬಗ್ಗೆ ವರದಿಯಾಗಿದೆ.


    ಬೈಕ್ ಸವಾರರು, ಮಾವಿನಗುಂಡಿ ಕಡೆಯಿಂದ ಬರುತ್ತಿದ್ದಾಗ ಹೊನ್ನಾವರ ಕಡೆಯಿಂದ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅತಿವೇಗ ಮತ್ತು ಅಜಾಗರುಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದ ಕಾರು ಚಾಲಕ,ಬೈಕ್ ಸವಾರರಿಗೆ ಗುದ್ದಿದ್ದಾನೆ ಎಂದು ತಿಳಿದುಬಂದಿದೆ.

    300x250 AD


    ಅಪಘಾತದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಉಮೇಶ ನಾಯ್ಕ ಹಾಗೂ ಹಿಂಬದಿ ಸವಾರ ನಿತೇಶ್ ನಾಯ್ಕನಿ ಅವರುಗೆ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ.

    Share This
    300x250 AD
    300x250 AD
    300x250 AD
    Back to top