ಶಿರಸಿ: ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ‘ಬಿಜೆಪಿ ಒಬಿಸಿ ಮೋರ್ಚಾ ಶಿರಸಿ ಗ್ರಾಮೀಣ’ ಮಂಡಲದ ತಾಲೂಕ್ ಕಾರ್ಯಕಾರಿಣಿ ಸಭೆಯು ಒಬಿಸಿ ಮೋರ್ಚಾ ಅಧ್ಯಕ್ಷ ಸತೀಶ ನಾಯ್ಕ್ ರವರ ಆಧ್ಯಕ್ಷತೆಯಲ್ಲಿ ಅ.23 ರಂದು ಜರುಗಿತು.
ಆತ್ಮ ನಿರ್ಭರ್ ಭಾರತದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಕೋವಿಡ್ ಲಸಿಕೆಯನ್ನು ಸ್ವದೇಶೀಯಾಗಿ ಉತ್ಪಾದಿಸಿ, 100ಕೋಟಿ ಲಸಿಕೆಯನ್ನು ನೀಡುವ ಮೂಲಕ ವಿಶಿಷ್ಟ ಸಾಧನೆಯನ್ನು ಕೇಂದ್ರ ಸರ್ಕಾರ ಮಾಡಿದ ಹಿನ್ನೆಲೆಯಲ್ಲಿ, ‘ಕರೋನಾ ವಾರಿಯರ್ಸ್’ ಗಳಿಗೆ ಗೌರವ ಸಮರ್ಪಣೆ ಮಾಡಿ ಸಿಹಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉಷಾ ಹೆಗಡೆ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ಒಬಿಸಿ ಮೋರ್ಚಾ ಜಿಲ್ಲಾ ಸದಸ್ಯ ಅಶೋಕ್ ಶೆಟ್ಟಿ, ಒಬಿಸಿ ಮೋರ್ಚಾ ಉಪಾಧ್ಯಕ್ಷ ಬೀರಪ್ಪ ಪಟಗಾರ್, ಅಕ್ಷಯ್, ವಿನಾಯಕ, ನರಸಿಂಹ ದೇವಾಡಿಗ, ದೇವರಾಜ್ ನಾಯ್ಕ್ ಮತ್ತು ಒಬಿಸಿ ಮೋರ್ಚಾ ಸಾಮಾಜಿಕ ಜಾಲತಾಣದ ಸದಸ್ಯ ಚಂದ್ರು ಪೂಜಾರಿ ಸಾಲ್ಕಣಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.