• first
    second
    third
    previous arrow
    next arrow
  • ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಿ; ಸಚಿವ ಸುನೀಲ್ ಕುಮಾರ್’ಗೆ ಮನವಿ

    300x250 AD

    ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ರಾಜಭವನದಲ್ಲಿ ಸಂಘಟಿಸಿದ ‘ಮಾತಾಡ್ – ಮಾತಾಡ್ ಕನ್ನಡ’ ಎಂಬ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲರು ಮತ್ತು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ರವರು ಭಾಗವಹಿಸಿದ್ದರು.

    300x250 AD


    ಈ ಸಂದರ್ಭದಲ್ಲಿ ಸಭೆಗೆ ಅಪೇಕ್ಷಿತರಾದ ಜಿಲ್ಲಾ ಬಿಜೆಪಿ ವಕ್ತಾರ ನ್ಯಾಯವಾದಿ ನಾಗರಾಜ ನಾಯಕ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಭೇಟಿಯಾಗಿ ಕರಾವಳಿ ತಾಲೂಕುಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಜಿಲ್ಲೆಯಲ್ಲೆಲ್ಲಾ ಸಿನೇಮಾ ಥಿಯೇಟರ್‍ಗಳು, ಬಸ್ಸುಗಳು ಮತ್ತು ಸಂತೆಗಳು ಇವೆಲ್ಲ ಕಾರ್ಯ ನಿರ್ವಹಿಸುತ್ತಿರುವಂತಹ ಸಂದರ್ಭದಲ್ಲಿ ಹೆಚ್ಚಿನ ಬಡ ಕಲಾವಿದರೇ ಇರುವ ಯಕ್ಷಗಾನದ ಪ್ರದರ್ಶನಕ್ಕೂ ಸಹ ಅವಕಾಶ ಮಾಡಿಕೊಡಬೇಕೆಂದು ಭಿನ್ನವಿಸಿದರು. ನಾಗರಾಜ ನಾಯಕರ ಮನವಿಗೆ ಸ್ಪಂದಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

    Share This
    300x250 AD
    300x250 AD
    300x250 AD
    Back to top