• first
    second
    third
    previous arrow
    next arrow
  • ಮೀನು ಹಿಡಿಯುತ್ತಿದ್ದ ಬಾಲಕನ ಹೊತ್ತೊಯ್ದ ಮೊಸಳೆ; ಬಾಲಕನಿಗಾಗಿ ಹುಡುಕಾಟ

    300x250 AD

    ದಾಂಡೇಲಿ: ಕಾಳಿ ನದಿಯ ದಂಡೆ ಮೇಲೆ ಮೀನಿಗೆ ಗಾಳ ಹಾಕಿ ಕುಳಿತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಹಿಡಿದು ಎಳೆದೊಯ್ದ ಘಟನೆ ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಕಾಳಿ ನದಿಯ ದಂಡೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

    ಅಲೈಡ್ ಪ್ರದೇಶದ ನಿವಾಸಿ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬವರ 15 ವರ್ಷದ ಮಗ ಮೊಹಿನ್ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬತಾನನು ಮೊಸಳೆ ಪಾಲಾದವ. ಮೀನಿಗೆ ಹಾಳ ಹಾಕಿ ಕುಳಿತಿದ್ದ ವೇಳೆ ಮೊಸಳೆ ಬಾಯಿಗೆ ಈತ ಸಿಲುಕಿದ್ದಾನೆ. ಈ ಘಟನೆ ನಡೆದ ತಕ್ಷಣವೆ ಅಲ್ಲೆ ಹತ್ತಿರದ ನಿವಾಸಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆಯ ಪಿಎಸೈ ಐ.ಆರ್.ಗಡೇಕರ ಹಾಗೂ ಪೊಲೀಸ್ ಸಿಬ್ಬಂದಿಗಳು, ವಲಯಾರಣ್ಯಾಧಿಕಾರಿ ವಿನಯ್ ಭಟ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

    300x250 AD

    ಸ್ಥಳೀಯರು ಎರಡೂರು ತೆಪ್ಪದ ಮೂಲಕ ಬಾಲಕನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇತ್ತ ಜಂಗಲ್ ಲಾಡಸ್ ಹಾಗೂ ಗಣೇಶಗುಡಿ ರ್ಯಾಪ್ಟಿಂಗಿನವರಿಗೆ ಮಾಹಿತಿ ನೀಡಿ ರ್ಯಾಪ್ಟ್ ಜೊತೆಗೆ ಸ್ಥಳಕ್ಕೆ ಕರೆಸಿ, ಅವರಿಂದಲೂ ಪತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಪ್ರವಾಸೋದ್ಯಮಿಗಳಾದ ಸ್ಪ್ಯಾನಿ, ರವಿ ನಾಯಕ ಮೊದಲಾದವರ ತಂಡ ರ್ಯಾಪ್ಟ್ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.


    ಸ್ಥಳದಲ್ಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳರ, ನಗರ ಸಭಾ ಸದಸ್ಯರುಗಳಾದ ಪ್ರೀತಿ ನಾಯರ್, ದಶರಥ ಬಂಡಿವಡ್ಡರ ಹಾಗೂ ನಗರದ ವಿವಿಧ ಸಂಘಟನೆಗಳ ಮುಖಂಡರುಗಳು ಮೊಕ್ಕಂ ಹೂಡಿದ್ದಾರೆ. ಈಗಾಗಲೆ ಗಣೇಶಗುಡಿ ಕೆಪಿಸಿಯವರಿಗೆ ಮಾಹಿತಿ ನೀಡಿ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ ನಾಲ್ಕುವರೆ ಘಂಟೆ ಸುಮಾರಿಗೆ ಎರಡು ಸಲ ಬಾಲಕನನ್ನು ಮೇಲಕ್ಕೆತ್ತಿ ನೀರಿನ ಕೆಳಗಡೆ ಮೊಸಳೆ ಹೋಗಿರುವುದು ಕಂಡು ಬಂದಿದೆ. ಇದೀಗ ಈ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

    Share This
    300x250 AD
    300x250 AD
    300x250 AD
    Back to top