• first
    second
    third
    previous arrow
    next arrow
  • ಕಟ್ಟಿದ ಮೋರಿ; ಕೊಳಚೆ ನೀರು ಹಿಡಿದಿದೆ ಬಾವಿಯ ದಾರಿ

    300x250 AD

    ಶಿರಸಿ: ಇಲಲಿನ ಮಾರಿಕಾಂಬಾ ನಗರದ ವಾರ್ಡ್ ಸಂಖ್ಯೆ 25 ರ ಎರಡನೇ ಅಡ್ಡ ರಸ್ತೆಯ ರಾಮನಬೈಲಿಗೆ ಹೋಗುವ ರಸ್ತೆಯಲ್ಲಿರುವ ಮೋರಿಯೊಂದು ಕಟ್ಟಿ ನಿಂತಿದೆ. ಮಾರಿಕಾಂಬಾ ನಗರದ ಮಧ್ಯ ಭಾಗದ ಈ ಮೋರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಗುಂಡಿಯಾಗಿ ನೀರು ಅಲ್ಲಿಯೇ ನಿಲ್ಲುವ ಪರಿಸ್ಥಿತಿಗೆ ಬಂದು ತಲುಪಿದ್ದು, ಗಬ್ಬು ನಾರುತ್ತಿದೆ. ಅಷ್ಟೇ ಅಲ್ಲದೇ ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.


    ಮೊದಲು ಕಟ್ಟಿದ್ದ ಈ ಮೋರಿ ಕುಸಿದಿದೆ. ಇದರಿಂದ ಅಕ್ಕ ಪಕ್ಕದ ಮನೆಯ ಬಾವಿಗಳಲ್ಲಿ ಕಲುಷಿತ ನೀರು ಸೇರಿ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ ಹಾಳಾಗಿದೆ. ನೀರು ನಿಲ್ಲುತ್ತಿರುವುದರಿಂದ ಅಸಾಧ್ಯವಾದ ವಾಸನೆಯ ಜೊತೆಗೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ವಾರ್ಡ್ ಸದಸ್ಯರಿಗೆ ಈ ಬಗ್ಗೆ ಗಮನ ಸೆಳೆದಾಗ ಕಾಲುವೆಯನ್ನು ನಿರ್ಮಿಸಿಕೊಡುವ ಭರವಸೆಯನ್ನು ನೀಡಿರುವುದು ಶ್ಲಾಘನೀಯ. ಆದರೆ ನಿರ್ಮಾಣ ಆಗುವವರೆಗೆ ಬಾವಿಯ ನೀರಿಗೆ ಮೋರಿ ನೀರು ಸೇರಿದರೆ ಬಳಕೆ ಹೇಗೆ ಮಾಡುವುದು..? ಕಾರಣ ವಾರಕ್ಕೆ ಒಮ್ಮೆಯಾದರೂ ಕಟ್ಟುವ ಈ ಮೋರಿಯನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿಕೊಟ್ಟಲ್ಲಿ ಆಗುವ ತೊಂದರೆಯನ್ನು ತಪ್ಪಿಸಿಕೊಡಲು ನಗರಸಭೆಯು ಕೆಲಸವನ್ನು ಮಾಡಿಕೊಡಬೇಕೆಂದು ಜನತೆಯ ಆಗ್ರಹವಾಗಿದೆ.

    300x250 AD


    ಇದರ ಜೊತೆಯಲ್ಲಿ ಮೋರಿಯ ಪಕ್ಕದಲ್ಲಿ ಕಳೆಯೂ ಅತಿಯಾಗಿ ಬೆಳದಿದ್ದು ಓಡಾಡಲು ತೊಂದರೆ ಆಗುತ್ತಿದೆ. ಜೊತೆಗೆ ಅಲ್ಲಿಯೇ ಕಸವನ್ನು ಹಾಕಿ ಹೋಗುತ್ತಾರೆ. ಇದರಿಂದ ಅವುಗಳು ಕೊಳೆತು ಕೆಟ್ಟ ವಾಸನೆಯೂ ಬರುತ್ತಿದೆ. ನಗರ ಸಭೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಮಾಡಬೇಕೆಂದು ಸ್ಥಳೀಯ ಎ ಎನ್ ಭಟ್ಟ ಒತ್ತಾಯಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top