ಯಲ್ಲಾಪುರ: ಕಳೆದ ಎರಡು ವರ್ಷಗಳಿಂದ ಹೊರ ತಾಲೂಕಿನ ಕಟ್ಟಡ ಕಾರ್ಮಿಕರು ಯಲ್ಲಾಪುರ ತಾಲೂಕಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಇದರಿಂದ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರು ಕೆಲಸ ವಿಲ್ಲದದೇ ನಿರುದ್ಯೋಗ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರವಿವಾರ ತಾಲೂಕಾ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿದಿದರು.
ಅಲ್ಲದೇ ಸ್ಥಳೀಯ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿದರು.ಇದೇ ಸಂದರ್ಭದಲ್ಲಿ ಸಚಿವ ಹೆಬ್ಬಾರ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಾಬು ರವಿ ನಾಯ್ಕ, ಉಪಾಧ್ಯಕ್ಷ ಯಲ್ಲಪ್ಪಾ ಮುನಗೊಡ್, ಮಂಜುನಾಥ ನಾಯ್ಕ ರಾಮಚಂದ್ರ ಪಾಟೀಲ್, ಪ್ರಕಾಶ ಭೋವಿ, ರಾಘವೆಂದ್ರ ಮುಂತಾದವರು ಇದ್ದರು.