ಮೊಸರಿನ ಕೋಡುಬಳೆ
ಅಡುಗೆ ಮನೆ: ಮಾಡುವ ವಿಧಾನ: ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಕರಿಬೇವು, ಹಸಿ ಮೆಣಸಿನ ಕಾಯಿ, ಉಪ್ಪು, 1 1/2 ಲೋಟ ಸ್ವಲ್ಪ ಹುಳಿಯಾದ ಮೊಸರು ಹಾಕಿ ಕುದಿಯಲು ಇಡಿ. ಮೊಸರು ಕುದಿಯಲು ಪ್ರಾರಂಭವಾದಾಗ 1 ಲೋಟ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ ಸಣ್ಣ ಉರಿಯಲ್ಲಿ ಸ್ವಲ್ಪ ಬೇಯಿಸಿ. ಒದ್ದೆ ಕೈಯಿಂದ ಮುಟ್ಚಿದರೆ ಕೈಗೆ ಹಿಟ್ಟು ಅಂಟದಿದ್ದರೆ ಹಿಟ್ಟು ಬೆಂದಿದೆ ಎಂದು ಅರ್ಥ.
ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಚೆನ್ನಾಗಿ ನಾದಿ, ಚಿಕ್ಕ ಚಿಕ್ಕ ಉಂಡೆ ಮಾಡಿ ಉದ್ದಕ್ಕೆ ನಾದಿ ತುದಿಗಳನ್ನು ಸೇರಿಸಿ ಕೋಡು ಬಳೆ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಕೋಡು ಬಳೆಗಳನ್ನು ಹಾಕಿ ಕೆಂಪಗೆ ಕರಿದು ಚಟ್ನಿಯೊಂದಿಗೆ ಸವಿಯಿರಿ.