ಶಿರಸಿ: ಇಲ್ಲಿನ ನಾದ ಶಂಕರ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಲ್ಲಿ ವರ್ಗಾಸರ ಪುಟ್ಟಣಮನೆ ರಂಗ ಮಂದಿರ ದಲ್ಲಿ ಅ.26ರ ಸಂಜೆ 6ಕ್ಕೆ ಶರಸೇತು ಬಂಧನ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದೆ.
ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಸತೀಶ ದಂಟಕಲ್, ನಂದನ ಹೆಗಡೆ ದಂಟಕಲ್, ಮದ್ದಲೆಯಲ್ಲಿ ಶಂಕರ ಭಾಗವತ, ಅನಿರುದ್ದ ಹೆಗಡೆ ವರ್ಗಾಸರ, ಶರತ್ ಜಾನಕೈ ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸನ್ನ ಹೆಗ್ಗಾರ ಪಾಲ್ಗೊಳ್ಳಲಿದ್ದಾರೆ.
ಮುಮ್ಮೇಳದಲ್ಲಿ ಪ್ರಭಾಕರ ಹಣಜಿಬೈಲು, ಪ್ರವೀಣ ತಟ್ಟಿಸರ, ವೆಂಕಟೇಶ ಬೊಗ್ರಿಮಕ್ಕಿ, ಸುಜಾತಾ ದಂಟಕಲ್, ಶ್ರಿಮತಿ ಹೆಗಡೆ ಸಾಗರ, ಹಾಸ್ಯ ದಲ್ಲಿ ಶ್ರೀಧರ ಚಪ್ಪರಮನೆ, ವೇಷಭೂಷಣ ಸಹಕಾರ ನಾಗರಾಜ ಪಂಚಲಿಂಗ ನೀಡಲಿದ್ದಾರೆ ಎಂದು ಸಂಯೋಜಕ ಶಂಕರ ಭಾಗವತ ತಿಳಿಸಿದ್ದಾರೆ.