ಅಂಕೋಲಾ: ಪಟ್ಟಣದ ಶಿರಕುಳಿ ಕಣಕಣೇಶ್ವರ ದೇವಸ್ಥಾನದ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಅಂಕೋಲಾ ಬಸ್ನಿಲ್ದಾಣದಿಂದ ಹೊನ್ನಾರಕಾ ಸಭಾಭವನದವರೆಗೆ ರಸ್ತೆ ಒಟ್ಟೂ 8.5 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕಿ ರೂಪಾಲಿ ನಾಯ್ಕ ಸ್ಥಳ ಪರಿಶೀಲನೆ ನಡೆಸಿದರು.
ಆರು ತಿಂಗಳ ಹಿಂದೆ ಶಿರಕುಳಿ ಕಣಕಣೇಶ್ವರ 2 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ, ನಿರಂತರ ಮಳೆಯಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು. ಆದರೆ, ಸಮಯ ಮೀರಿದ್ದರಿಂದ ಪಕ್ಕಾ ರಸ್ತೆ ನಿರ್ಮಾಣಕ್ಕೆ ಸೂಚಿಸಲಾಗಿದೆ. ಮೂರು ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರ ಬಳಕೆಗೆ ಅನುಕೂಲ ಕಲ್ಪಿಸಲು ಸೂಚನೆ ನೀಡಲಾಗಿದೆ.
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಬೇಕು. ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಬೇಕು. ಈ ಮೂಲಕ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆಗೆ ಪೆÇಲೀಸ್ ಇಲಾಖೆ ಸಾತ್ ನೀಡಬೇಕು ಎಂದರು.
ಪುರಸಭೆ ವ್ಯಾಪ್ತಿಯ ರಸ್ತೆಯ ಅಡಿಯಲ್ಲಿರುವ ನೀರಿನ ಪೈಪ್ ಲೈನ್ಗಳು ದುರಸ್ತಿ ಮಾಡುವುದಿದ್ದರೆ, ರಸ್ತೆ ನಿರ್ಮಾಣ ಪೂರ್ವದಲ್ಲಿ ದುರಸ್ತಿ ಮಾಡಿಕೊಳ್ಳಬೇಕು. ರಸ್ತೆ ನಿರ್ಮಾಣವಾದ ನಂತರ ಅಗಿಯುವುದಕ್ಕೆ ಅವಕಾಶ ನೀಡದಂತೆ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಪುರಸಭೆ ಅಧಿಕಾರಿಗೆ ಶಾಸಕಿ ರೂಪಾಲಿ ಹೇಳಿದರು.
ಮುಂದಿನ ಆರು ತಿಂಗಳ ಒಳಗಾಗಿ ಶಿರಕುಳಿಯಿಂದ ಹೊನ್ನಾರಕಾ ಸಭಾಭವನದವರೆಗಿನ ಅಂಕೋಲಾ ಪಟ್ಟಣದ ಮುಖ್ಯ ರಸ್ತೆಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಯೋಗ್ಯವಾಗುವಂತೆ ರಸ್ತೆ ನಿರ್ಮಾಣ ಮಾಡಬೇಕು. ಸಂಬಂಧಪಟ್ಟ ಇಲಾಖೆಗಳು ಕಾಮಗಾರಿ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಅಂಕೋಲಾ ಮಂಡಲ ಅಧ್ಯಕ್ಷರು, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳು, ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು