• first
  second
  third
  previous arrow
  next arrow
 • ಶಿಕ್ಷಣ ವ್ಯವಸ್ಥೆಯು ಮನುಷ್ಯನಿಗೆ ಸಂಸ್ಕಾರ ನೀಡುತ್ತೆ; ಸ್ಪೀಕರ್ ಕಾಗೇರಿ

  300x250 AD

  ಶಿರಸಿ: ಪ್ರತಿಯೊಬ್ಬರೂ ತಾನು ಕಲಿತ ಶಾಲೆಯ ಮೇಲೆ ಅಭಿಮಾನ ಹೊಂದಿರಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


  ಅವರು ಶನಿವಾರ ಕುಳವೆ ಬರೂರಿನ ಜನತಾ ವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
  ಮನುಷ್ಯನನ್ನು ಸಂಸ್ಕಾರವಂತನನ್ನಾಗಿಸುವ ವಾತಾವರಣ ನಮ್ಮ ಜಿಲ್ಲೆಯಲ್ಲಿದೆ. ಇಂತಹಾ ಸಂಸ್ಕಾರ ನೀಡುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ಪಾತ್ರ ದೊಡ್ಡದು ಎಂದು ನಮ್ಮ ಜಿಲ್ಲೆಯ ಹಿರಿಯರು ಖಾಸಗೀ ಶಿಕ್ಷಣ ಸಮಸ್ಥೆಗಳನ್ನು ಸ್ಥಾಪಿಸಿದ್ದರಿಂದ ಶೈಕ್ಷಣಿಕವಾಗಿ ಮುಂದುವರಿಯಲು ಸಾಧ್ಯವಾಗಿದೆ. ಜಿಲ್ಲೆಗೆ ದಿನಕರ ದೇಸಾಯಿ ಅವರ ಕೊಡುಗೆ ದೊಡ್ಡದು. ಅವರು ಬಿತ್ತಿದ ಶೈಕ್ಷಣಿಕ ಬೀಜವು ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.


  ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ದಿನಕರ ದೇಸಾಯಿ ಅವರು ಬರೆದ ಹಲವು ಚುಟುಕುಗಳು ಸರಳವಾಗಿದ್ದು, ಜನಸಾಮಾನ್ಯರಿಗೂ ಅರ್ಥವಾಗುವಂತಿದೆ. ಅವರ ಪ್ರಭಾವ ಜಿಲ್ಲೆಯ ಶೈಕ್ಷಿಕ ಕ್ಷೇತ್ರದ ಮೇಲೆ ಸದಾ ಇರುವಂತದ್ದು ಎಂದರು.

  300x250 AD


  ಕರಾವಳಿ ಹಾಗೂ ಮಲೆನಾಡಿನ ಹಳ್ಳಿಗಳಲ್ಲೂ ಶೇ.90 ರಷ್ಟು ಶೈಕ್ಷಣಿಕ ಸಾಧನೆ ಆಗಿದೆ. ಇದು ನಮ್ಮ ಹಿರಿಯರ ಸಾಧನೆ ಎಂದರು.
  ಅಧ್ಯಕ್ಷತೆ ವಹಿಸಿದ್ದ ಕೆನರಾ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್. ಪಿ. ಕಾಮತ್ ಮಾತನಾಡಿ, ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರ ತುಂಬುವ ಕೆಲಸ ಆಗಬೇಕು. ಅದಕ್ಕಾಗಿಯೇ ಟ್ರಸ್ಟ್ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಚೇಂಜ್ ಮೇಕರ್ಸ್ ಫಾರ್ ಬೆಟರ್ ಟುಮಾರೋ” ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಟ್ರಸ್ಟ್ ಸದಾ ಶೈಕ್ಷಣಿಕ ಕಾರ್ಯಗಳಿಗೆ ಸಮಾಜ ಮುಖಿಯಾಗಿದೆ ಎಂದು ತಿಳಿಸಿದರು.


  ಕಾರ್ಯಕ್ರಮದಲ್ಲಿ ಶಾಲೆಯ ಹಳೆ ಕಟ್ಟಡದ ನಾಮ ಫಲಕ, ನೂತನ ಶಾಲಾ ಆವರಣದ ಗೋಡೆ ಹಾಗೂ ಕಲಾವಿದ ಕೌಶಿಕ ಹೆಗಡೆ ಬಿಡಿಸಿದ ದಿನಕರ ದೇಸಾಯಿ ಅವರ ಭಾವ ಚಿತ್ರ ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಮ್. ಎಸ್. ಭಟ್, ಮುಖ್ಯಶಿಕ್ಷಕ ವಿನೋದ ಹೆಗಡೆ, ಶಿಕ್ಷಕ ನಾಗಪತಿ ಹೆಗಡೆ ಸಮಿತಿ ಉಪಾಧ್ಯಕ್ಷೆ ಭಾಗೀರತಿ ಜ್ಯೋಷಿ ಇದ್ದರು.

  Share This
  300x250 AD
  300x250 AD
  300x250 AD
  Back to top