ದಾಂಡೇಲಿ: ದಾಂಡೇಲಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರು ಓಡಿ ಹೋಗಿದ್ದಾರೆ.
ನಾಲ್ವರು ಆರೋಪಿಗಳು ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕೆ.ಜಿ 942 ಗ್ರಾಂ ತೂಕದ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಬದರಿನಾಥ ಹಾಗೂ ದಾಂಡೇಲಿ ಉಪವಿಭಾಗದ ಡಿವೈಎಸ್‌ಪಿಶವಾನಂದ ಚಲವಾದಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಆರೋಪಿತ ಚಾಂದ ಪಾಷಾ, ಪ್ರಣೀತ ಸಾಣಾ ಸಿಕ್ಕಿ ಬಿದ್ದಿದ್ದು, ಹಸೇನಸಾಬ, ಮುಜಫರ್ ಓಡಿ ಹೋಗಿದ್ದಾರೆ. ಇವರಿಂದ ಅಂದಾಜು 385000 ರೂ ಮೌಲ್ಯದ ಗಾಂಜಾ ಹಾಗೂ ನಗದು 1500 ರೂ ವಶಕ್ಕೆ ಪಡೆದಿದ್ದಾರೆ. ಆರೋಪಿತರ ಮೇಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.