ಯಲ್ಲಾಪುರ: ಇಲ್ಲಿನ ವಾರ್ಡ ನಂ.6 ಅಥವಾ 7 ರಲ್ಲಿರುವ ಆನಂದು ನಾಯಕ ಅವರ ಮನೆ ಪಕ್ಕದಲ್ಲಿ ಚರಂಡಿಯನ್ನು ಅವರ ಕಂಪೌಂಡ ಪಕ್ಕದಲ್ಲಿ ಅರ್ಧ- ಮರ್ಧ ಕಾಮಗಾರಿ ಮಾಡಿದ್ದಾರೆ. ಮೇಲಿಂದ ರಭಸದಿಂದ ಬರುವ ನೀರಿಗೆ ಆನಂದು ಅವರ ಕಂಪೌಡ ಮುಂದಿನ ದಿನಗಳಲ್ಲಿ ಬೀಳುವ ಸಂಭವ ಇದೆ ಎಂದು ಆನಂದು ಅವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಳೆ ಬಿದ್ದಾಗ ಕಸ ಕಡ್ಡಿಗಳು ಚರಂಡಿಯಲ್ಲಿ ತಡೆದು ರಸ್ಥೆಯ ಮೇಲೆ ಹರಿಯುತ್ತಿದೆ ಎಂದು ಅಲ್ಲಿಯ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪಟ್ಟಣ ಪಂಚಾಯತದವರು ಸಾರ್ವಜನಿಕರ ತೊಂದರೆಯನ್ನು ಬಗೆಹರಿಸಿಕೊಡಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಾರಾಯಣ ನಾಯಕರು ಕೇಳಿಕೊಳ್ಳುತ್ತಿದ್ದಾರೆ.