ಭಟ್ಕಳ: ತಾಲೂಕಿನ ಜಾಲಿ ಆಜಾದ್ ನಗರ 7ನೇ ಕ್ರಾಸ್’ನ ಅಬುಹನೀಫಾ ಸ್ಟ್ರೀಟನಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳತನವಾದ ಮನೆಯಲ್ಲಿ ಉತ್ತರ ಪ್ರದೇಶ ಕೂಲಿ ಕಾರ್ಮಿಕರು ವಾಸವಾಗಿದ್ದು. ಇವರು ತಮ್ಮ ಕೆಲಸದ ನಿಮಿತ್ತ ಒಂದು ವಾರದ ಹಿಂದೇ ಕೆಲಸಕ್ಕಾಗಿ ಹೊನ್ನಾವರಕ್ಕೆ ತೆರಳಿದ್ದರು ಎನ್ನಲಾಗಿದೆ. ತಮ್ಮ ಕೆಲಸ ಮುಗಿಸಿ ಶುಕ್ರವಾರ ಬೆಳಿಗ್ಗೆ ತಾವು ವಾಸವಿದ್ದ ಬಾಡಿಗೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ ಎನ್ನಲಾಗಿದೆ.
ಕೂಲಿ ಕೆಲಸಕ್ಕೆ ಬಳಸುವ ಸಾಮಾಗ್ರಿ, ಟಿವಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಪೆÇಲೀಸ ತನಿಖೆಯಿಂದ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ಪಿ.ಎಸ್.ಐ ಭರತ್ ಕುಮಾರ ಹಾಗೂ ಪೆÇಲೀಸ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆÇಲೀಸ್ ತನಿಖೆಯ ನಂತರ ಪೂರ್ಣ ಮಾಹಿತಿ ತಿಳಿದು ಬರಬೇಕಿದೆ.