ಯಲ್ಲಾಪುರ: ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಾರೆ ಗ್ರಾಮ ನೀರಹಕ್ಲು ಸಮೀಪದ ಅರಣ್ಯದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ನಿನ್ನೆ ಕಾರವಾರ ತಾಲೂಕಿನ ಹರೂರು ಬಳಿಯಲ್ಲಿ ಗದ್ದೆಗೆ ಬಂದಿದ್ದ ಈ ಎರಡು ಆನೆಗಳು ಸ್ಥಳೀಯ ಅರಣ್ಯದಲ್ಲಿ ಬೀಡು ಬಿಟ್ಟಿದ್ದು ಶುಕ್ರವಾರ ಸಂಜೆ ಮತ್ತೆ ರವಿ ತಿಮ್ಮಣ್ಣ ಕುಣಬಿ ಮತ್ತ ಹರೀಶ್ಚಂದ್ರ ಕುಪ್ಪಣ್ಣ ಗೌಡರವರಿಗೆ ಹರೂರಿಂದ ಬರುವಾಗ ಕಾಣಿಸಿಕೊಂಡಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸುಬ್ಬಣ್ಣ ಕುಂಟೇಗಾಳಿ ಮತ್ತು ಮಾಚಣ್ಣಾ ಬಾರೆಮಠ ಈ ಕುರಿತು ಯಲ್ಲಾಪುರದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ.
ಕಾಳಿ ನದಿಯಂಚಿನ ಅಣಶಿ ಅಭಯಾರಣ್ಯದಿಂದ ಈ ಆನೆಗಳು ಕದ್ರಾ ಜಲಾಶಯದ ಮೂಲಕ ಅರಣ್ಯ ಪ್ರದೇಶದಿಂದ ಯಲ್ಲಾಪುರ ಕಾರವಾರ ಗಡಿಯಂಚಿನ ಹರೂರ ಬಳಿ ಅರಣ್ಯಕ್ಕೆ ದಾರಿ ತಪ್ಪಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಒಂದೆರಡು ದಿನ ಕಾಡಿನಲ್ಲಿ ಇದ್ದು ಮತ್ತೆ ವಾಪಸ್ಸು ಅಣಶಿ ಅಭಯಾರಣ್ಯಕ್ಕೆ ಹಿಂದಿರುಗಬಹುದು. ಸ್ಥಳೀಯರು ಭಯಪಡುವ ಅಗತ್ಯವಿಲ್ಲಾ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ತಿಳಿಸಿದ್ದಾರೆ.