ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಫದ ರಚನೆಯ ಕುರಿತಂತೆ ಚರ್ಚಿಸಿ ನಿರ್ಣಯ ಕೈಗೊಳ್ಳುವದರ ಸಲುವಾಗಿ ನ.14 ರವಿವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿರಸಿಯ ಸಾಮ್ರಾಟ್ ಹೋಟೆಲ್‍ನ ಸಭಾಂಗಣದಲ್ಲಿ ಚದುರಂಗ ಆಟಗಾರರು ಹಾಗೂ ಚದುರಂಗ ಆಸಕ್ತರ ಸಭೆಯನ್ನು ಕರೆಯಲಾಗಿದೆ.
ಕಾರಣ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಚದುರಂಗ ಆಸಕ್ತರು ಈ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಹಾಗೂ ಸೂಚನೆ ನೀಡಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನವೀನ ಹೆಗಡೆ 9480621062 ಅಥವಾ ರವಿ ಹೆಗಡೆ 8073230690 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.