ಯಲ್ಲಾಪುರ: ಭೂಮಿ ಸುಪೋಷಣ ಕಾರ್ಯಕ್ರಮವನ್ನು ಸಾರ್ವತ್ರಿಕವಾಗಿ ಆಚರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಕರೆಕೊಟ್ಟಂತೆ ಅ.23 ಶನಿವಾರ ಭರತನಹಳ್ಳಿಯ ಭ್ರಮರಾಂಭ ದೇವಸ್ಥಾನದಲ್ಲಿ ನಡೆಯಲಿದೆ.
ತಲತಲಾಂತರದಿಂದ ಆಶ್ವೀಜ ಶುದ್ಧ ಪೂರ್ಣಿಮೆಯಂದು ಭೂಮಿಪೂಜೆಯನ್ನು ಮಾಡುತ್ತಾ ಬಂದಿದ್ದು, ಸೋಂದಾ ಸ್ವರ್ಣವಲ್ಲಿ ಶ್ರೀಗಳು ಅ.20 ರಂದು ಕರಡೊಳ್ಳಿ ಗೋಶಾಲೆಯಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ. ಹೀಗಾಗಿ ಅ.23 ರಂದು ಭೂಮಿ ಸುಪೋಷಣ ಕಾರ್ಯಕ್ರಮಕ್ಕೆ ತಾವೆಲ್ಲರೂ ಪ್ರತಿ ಮನೆಯಿಂದಲೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ತಾವು ಬರುವಾಗ ತಮ್ಮ ಜಮೀನಿನ ಒಂದು ಮುಷ್ಟಿ ಮಣ್ಣನ್ನು ತಂದು ಇಲ್ಲಿ ಪೂಜಿಸಿ ನಂತರ ಮಣ್ಣನ್ನು ತೆಗೆದುಕೊಂಡು ಹೋಗಿ ಜಮೀನಿಗೆ ಹಾಕಬೇಕು. ತನ್ಮೂಲಕ ಈ ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾಗಿ ಎಂದು ಭೂಮಿ ಸುಪೋಷಣ ಮತ್ತು ಸಂರಕ್ಷಣಾ ಸಮಿತಿ, ಸಾವಯವ ಕೃಷಿ ಪರಿವಾರ ಮತ್ತಿತರರ ರೈತ ಸಂಘಟನೆಗಳು ತಿಳಿಸಿದೆ.