• first
    second
    third
    previous arrow
    next arrow
  • ಐ.ಟಿ ಕ್ವಿಜ್; ಲಯನ್ಸ್ ವಿದ್ಯಾರ್ಥಿ ಜಯಂತ ರಾಷ್ಟ್ರ ಮಟ್ಟಕ್ಕೆ

    300x250 AD

    ಶಿರಸಿ: ದೇಶದ ಪ್ರತಿಷ್ಟಿತ ಉದ್ದಿಮೆಗಳಲ್ಲೊಂದಾದ ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಕರ್ನಾಟಕ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಸಂವಹನ ತಂತ್ರಜ್ಞಾನ ಜಾಗೃತಿಯ ಕುರಿತಾಗಿ ನಡೆಸುವ ಗ್ರಾಮೀಣ ಐ.ಟಿ. ರಸಪ್ರಶ್ನೆ ಸ್ಪರ್ಧೆಯಲ್ಲಿ ಸ್ಥಳೀಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಲಯನ್ಸ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ 9ನೆ ತರಗತಿ ವಿದ್ಯಾರ್ಥಿ ಜಯಂತ ನಾಗಪತಿ ಹೆಗಡೆ ಕಾಗೇರಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

    300x250 AD


    ಶಾಲಾ ಮಟ್ಟ, ತಾಲ್ಲೂಕಾ ಮಟ್ಟ, ಬೆಳಗಾವಿ ವಿಭಾಗ ಮಟ್ಟದಲ್ಲಿ ಈ ಹಿಂದೆ ಪ್ರಥಮ ಸ್ಥಾನ ಪಡೆದಿದ್ದ ಜಯಂತ್ ಈಗ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾನೆ. ಆ ಮೂಲಕ ಶಿರಸಿ ಲಯನ್ಸ ಶಾಲೆಯ ವಿದ್ಯಾರ್ಥಿಯ ಸಾಧನೆಯನ್ನು ರಾಜ್ಯವೇ ಗುರುತಿಸುವಂತಾಗಿದೆ. ಈ ವಿದ್ಯಾರ್ಥಿಯ ಸಾಧನೆಗೆ ಕಾರಣರಾದ ಕಂಪ್ಯೂಟರ್ ಶಿಕ್ಷಕಿ ಚೈತ್ರಾ ಹೆಗಡೆ, ವಿದ್ಯಾರ್ಥಿಯ ಪಾಲಕರನ್ನು ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದ ಹಾರ್ದಿಕವಾಗಿ ಅಭಿವಂದಿಸಿದೆ. ರಾಷ್ಟ್ರ ಮಟ್ಟದಲ್ಲೂ ಇದೇ ಯಶಸ್ಸಿನ ಸರಣಿಯನ್ನು ಜಯಂತ್ ಮುಂದುವರಿಸಲಿ ಎಂದು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಶುಭ ಹಾರೈಸಿದೆ.

    Share This
    300x250 AD
    300x250 AD
    300x250 AD
    Back to top