• first
    second
    third
    previous arrow
    next arrow
  • ಆನಗೋಡಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

    300x250 AD

    ಯಲ್ಲಾಪುರ: ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಾನೂನು ಅರಿವು ಅಭಿಯಾನದಲ್ಲಿ ನ್ಯಾಯಾಲಯದ ನಡಿಗೆ ಹಳ್ಳಿ ಕಡೆಗೆ ಧ್ಯೇಯದಂತೆ ಶುಕ್ರವಾರ ತಾಲೂಕಿನ ಆನಗೋಡದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.


    ಸಹಾಯಕ ಸರಕಾರಿ ಅಭಿಯೋಜಕ ಪ್ರಸಾದ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬರೂ ದಿನನಿತ್ಯ ಬೇಕಾಗುವ ಕನಿಷ್ಠ ಕಾನೂನಿನ ತಿಳುವಳಿಕೆ ಹೊಂದಿರಬೇಕು ಎಂದರು.

    300x250 AD


    ನ್ಯಾಯವಾದಿಗಳಾದ ಸರಸ್ವತಿ ಭಟ್, ಬೇಬಿ ಅಮಿನಾ ಶೇಖ್ ಕಾನೂನು ಅರಿವು ಕುರಿತು ಉಪನ್ಯಾಸ ನೀಡಿದರು. ಗ್ರಾ.ಪಂ.ಅಧ್ಯಕ್ಷ ಪರಮೇಶ್ವರ ಗಾಂವ್ಕಾರ ಅಧ್ಯಕ್ಷತೆ ವಹಿಸಿದ್ದರು.ಪಿಡಿಒ ನಾರಾಯಣ ಗೌಡ ಸ್ವಾಗತಿಸಿದರು. ಪತ್ರಕರ್ತ ಕೆ.ಎಸ್.ಭಟ್ಟ ಆನಗೋಡ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Back to top