ಕಾರವಾರ : ಇಲ್ಲಿನ ಮುದಗಾ ಎನ್ಸಿಸಿ ಕಂಪನಿಯ ಮುಖ್ಯ ಗೇಟ್ ಬಳಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿದ್ದು,27 ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮುದಗಾ ಎನ್ಸಿಸಿ ಕಂಪನಿಯ ಮೇನ್ ಗೇಟ್ ನಲ್ಲಿರುವ ಸೆಕ್ಯೂರಿಟಿ ಗಾರ್ಡ್ ರಂಜನ ದುರ್ಗೇಕರ್ ಮತ್ತು ಅಭಿಷೇಕ ತಾಂಡೇಲ್ ಹಲ್ಲೆಗೊಳಗಾದವರಾಗಿದ್ದಾರೆ.
ಇವರು ಕಂಪನಿಯ ಮೇನ್ ಗೇಟ್ನಲ್ಲಿ ಪ್ರವೇಶ ಮಾಡುವಾಗ ನೇವಲ್ ಬೇಸ್ ಅಧಿಕಾರಿಗಳ ಆದೇಶದಂತೆ ಎಲ್ಲರ ಬ್ಯಾಗಗಳನ್ನು ಚೆಕ್ ಮಾಡಿ ಒಳಗಡೆ ಬಿಡುತ್ತಿದ್ದಾಗ, ಏಕೆ ಬ್ಯಾಗ್ ಚೆಕ್ ಮಾಡುತ್ತಿಯಾ ಎಂದು ಕೆಲ ಕಾರ್ಮಿಕರು ಖ್ಯಾತೆ ತೆಗೆದು ಸೆಕ್ಯೂರಿಟಿ ಗಾರ್ಡ್ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನು ತಪ್ಪಿಸಲು ಹೋದ ಅಭಿಷೇಕ ಮೇಲೂ ಅಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು 27 ಮಂದಿ ಕಾರ್ಮಿಕರನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ.