• first
    second
    third
    previous arrow
    next arrow
  • ಶಿಕ್ಷಕ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ನ.6 ಕೊನೆಯ ದಿನಾಂಕ

    300x250 AD

    ಕಾರವಾರ: ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರದ ಪಟ್ಟಿಯಲ್ಲಿ ಹೆಸರು ಸೇರ್ಪಡಿಸಲಾಗುತ್ತಿದ್ದು ನ. 6 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮತದಾರರ ನೋಂದಣಿ ನಿಯಮಗಗಳು 1960 31(3)ನೇ ನಿಯಮದ ಅನುಸಾರ, ಭಾರತದ ಪ್ರಜೆಯಾಗಿರುವ, ಆಯಾ ಮತ ಕ್ಷೇತ್ರದೊಳಗಡೆ ಸಾಮಾನ್ಯ ನಿವಾಸಿಯಾಗಿರುವ ಮತ್ತು 1ನೇ ನವೆಂಬರ್ 2021 ಅರ್ಹತಾ ದಿನಾಂಕಕ್ಕೆ ಮೊದಲು 6 ವರ್ಷಗಳಲ್ಲಿ ಕನಿಷ್ಟ 3 ವರ್ಷದಷ್ಟು, ದರ್ಜೆಯಲ್ಲಿ ಪ್ರೌಢ ಶಾಲೆಗಿಂತ ಕಡೆಮೆಂiÀiಲ್ಲದ ನಿರ್ದಿಷ್ಟಪಡಿಸಿದಂತೆ ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಭೋದನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹ.

    ಆಸಕ್ತ ಅರ್ಹ ವ್ಯಕ್ತಿಗಳು ಪ್ರಮಾಣ ಪತ್ರ (ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ), ದೃಢೀಕೃತ ಮತದಾರರ ಗುರುತಿನಚೀಟಿ ಪ್ರತಿ, ದೃಢೀಕೃತ ಆಧಾರಕಾರ್ಡ್ ಪ್ರತಿ, ಪಾಸ್ಪೋಟ್ ಅಳತೆಯ ಭಾವಚಿತ್ರ ಅರ್ಜಿಹೊಂದಿಗೆ ಲಗತ್ತಿಸಿ ನಮೂನೆ-19 ದ್ವಿಪ್ರತಿಯೊಂದಿಗೆ ನ. 6 ರೊಳಗಾಗಿ ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ತಹಶೀಲ್ದಾರ ಕಾರ್ಯಲಯದ ನಿಯೋಜಿತ ಅಧಿಕಾರಿಗಳ ಕಾರ್ಯಲಯಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಹಶೀಲ್ದಾರ್ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Back to top