• first
    second
    third
    previous arrow
    next arrow
  • ಯಶಸ್ವಿಯಾಗಿ ನಡೆದ ಶಾಮಿಯಾನ- ಡೆಕೊರೇಟರ್ಸ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ

    300x250 AD

    ಶಿರಸಿ: ಶಾಮಿಯಾನ, ಡೆಕೊರೇಟರ್ಸ ಧ್ವನಿ ಹಾಗು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಎರಡನೇ ವಾರ್ಷಿಕೋತ್ಸವ ಗುರುವಾರ ನಡೆಯಿತು.


    ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ರಾಜ್ಯಧ್ಯಕ್ಷ ಶಿವಕುಮಾರ ಸಿ ಹಿರೇಮಠ ಇವರು ಶಾಮಿಯಾನ, ಡೆಕೊರೇಟರ್ಸ, ಧ್ವನಿ ಹಾಗು ಬೆಳಕು ಕೆಲಸ ಮಾಡುವವರು ಎಲ್ಲರಂತೆ ಕಾರ್ಮಿಕರಾಗಿರುವುದರಿಂದ ಸಂಘದ ಸದಸ್ಯರು ಮೊದಲು ಕಾರ್ಮಿಕ ಇಲಾಖೆಯ ಕಚೇರಿಗೆ ಹೋಗಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳುವ ಮೂಲಕ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಪಡೆಯಬೇಕೆಂದು ಹೇಳಿದರು. ಈ ಮೊದಲು ಇಲ್ಲಿ ಕೆಲಸ ಮಾಡುವವರಿಗೆ ಕಾರ್ಮಿಕರೆಂದು ಪರಿಗಣೆ ಮಾಡುತ್ತಿರಲಿಲ್ಲ. ಇದೀಗ ಸಂಘದ ಬೇಡಿಕೆಯನ್ನು ಮನ್ನಿಸಿರುವ ಸರಕಾರ ನಾವು ಕೂಡಾ ಕಾರ್ಮಿಕರೆಂದು ಪರಿಗಣಿಸಿ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಎಂದರು. ನಮ್ಮ ಕೆಲಸ ನಮಗೆ ಅನ್ನ ನೀಡಿರುವುದರಿಂದ ನಾವು ಸಮಾಜಕ್ಕೆ ಅದರ ರುಣ ತೀರಿಸುವ ಕೆಲಸ ಮಾಡಬೇಕಾಗಿದೆ. ಸಾಧ್ಯವಾದರೆ ನಿಮ್ಮ ಮಕ್ಕಳು ಕೂಡಾ ಕಲಿಯುವುದರಲ್ಲಿ ಆಸಕ್ತಿ ತೋರದಿದ್ದರೆ ಅವರಿಗೆ ಶಾಮಿಯಾನ, ಡೆಕೋರೇಟರ್ಸ, ಧ್ವನಿ ಅಥವಾ ಬೆಳಕು ನೀಡುವ ಕೆಲಸದಲ್ಲಿ ಮುಂದುವರೆಸಿಕೊಂಡು ಹೋಗಿ. ಇದರಿಂದ ನಮ್ಮ ಪರಂಪರೆ ಮುಂದುವರಿದಂತಾಗುತ್ತದೆ ಎಂದರು.

    ಕೊರೊನ ಸಂದರ್ಭದಲ್ಲಿ ಕಾರವಾರ ಜಿಲ್ಲೆ ಹಿಡಿದು ಅನೇಕ ಜಿಲ್ಲೆಯವರು ನಮ್ಮ ಕಾರ್ಮಿಕರಿಗೆ ಕೊರೊನ ನೆಪ ಒಡ್ಡಿ ಕೆಲಸವಿಲ್ಲದಂತೆ ಮಾಡಿ ಅವರ ಹೊಟ್ಟೆಗೆ ಹಿಟ್ಟಿಲ್ಲದಂತೆ ಮಾಡಿದ್ದಾರೆ. ನಮ್ಮ ಕೆಲಸದ ಸೇವೆ ಎಷ್ಟಿದೆ ಎಂದರೆ ಹುಟ್ಟಿನಿಂದ ಹಿಡಿದು ಸಾಯುವವರೆಗೂ ನಮ್ಮ ಸೇವೆ ಈ ಸಮಾಜಕ್ಕೆ ಬೇಕೆಬೇಕು. ಆದರೆ ಈ ಸಮಾಜ ನಮ್ಮನ್ನು ನೋಡುವ ದೃಷ್ಠಿಮಾತ್ರ ಬೇರೆ. ನಗರಸಭೆಯವರು ಸಂಘಕ್ಕೆ ಜಾಗ ನೀಡಿದಲ್ಲಿ ನಾವೆಲ್ಲ ಧನ ಸಂಗ್ರಹಿಸಿ ಶಿರಸಿಯಲ್ಲಿ ನಮಗೊಂದು ಸಭಾಭವನ ನಿರ್ಮಿಸಲು ಸಿದ್ದರಿರುವದಾಗಿ ಅವರು ನಗರಸಭೆಗೆ ಆಗ್ರಹಿಸಿದರು. ನಮ್ಮ ಸಂಘದವರು ದರ ನಿಗದಿ ಮಾಡುವ ಮುನ್ನ ಮೊದಲು ಸಂಘಟಿತರಾಗಬೇಕು. ಇಲ್ಲವಾದಲ್ಲಿ ನಾವು ನಿಗದಿ ಪಡಿಸಿದ ದರ ಜನರಿಂದ ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ ಎಂದರು.

    300x250 AD


    ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ ಕೊರೊನ ಸಂದರ್ಭದಲ್ಲಿ ನಗರಸಭೆಯಿಂದ ಇಲ್ಲಿ ಕೆಲಸ ಮಾಡುವವರಿಗೆ ಕಾರ್ಡ ಕೊಡಿಸುವ ಮೂಲಕ ಹೊರಗೆ ತಿರುಗಾಡಲು ಅನುಕೂಲ ಮಾಡಿಕೊಡಲಾಗಿತ್ತು. ಕೊರೊನದಿಂದಾಗಿ ಅವರ ಪಾಡು ಹೇಳತೀರದ್ದಾಗಿತ್ತು. ಈಗ ಅವರಿಗೆ ಹಿಡಿದಿದ್ದ ಕರಿ ಮೋಡ ಸರಿದಿದ್ದು ಮುಂದೆ ಅವರಿಗೆ ಒಳ್ಳೆಯದಾಗುವ ವಿಶ್ವಾಸವಿದೆ ಎಂದರು.


    ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಸಂತೋಷಕುಮಾರ ಮಾತನಾಡಿ ಶಾಮಿಯಾನ, ಡೆಕೋರೇಟರ್ಸ, ಧ್ವನಿ ಹಾಗು ಬೆಳಕು ಕೆಲಸ ಮಾಡುವವರು ಒಂದು ರೀತಿಯಲ್ಲಿ ಮಾವಿನ ಟೊಂಗೆ ಇದ್ದಂತೆ. ಮಾವಿನ ತೋರಣದಂತೆ ಇವರ ಸೇವೆ ಪ್ರತಿಯೊಂದು ಪುಣ್ಯ ಕಾರ್ಯದಲೂ ಬೇಕು. ಇಂತವರಿಗೆ ಸರಕಾರ ಕೈ ಹಿಡಿಯುವ ಕೆಲಸಮಾಡಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಉಪಾದ್ಯಕ್ಷ ಹರೀಶ ಪಂಡಿತರವರು ಸಂಘ ಬೆಳೆದು ಬಂದ ದಾರಿ ಹಾಗು ಸಂಘದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅದ್ಯಕ್ಷ ಕೃಷ್ಣಾ ಎಸ್ ಗುಡಿಗಾರ ವಹಿಸಿದ್ದರು. ಶಿರಸಿ ರತ್ನಾಕರ ಕಾರ್ಯನಿರ್ವಹಿಸಿ ಸ್ವಾಗತಿಸಿದರು. ವಿನಾಯಕ ಶೇಟ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಬಳಿಕ ಭೋಜರಾಜ ಶಿರಾಲಿ, ಶಿರಸಿ ರತ್ನಾಕರ ಸೇರಿದಂತೆ ಶಿರಸಿಯ ಅನೇಕ ಉದಯೋನ್ಮುಖ ಗಾಯಕರು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

    Share This
    300x250 AD
    300x250 AD
    300x250 AD
    Back to top