ಶಿರಸಿ: ಲಾಕ್ ಡೌನ್ ಸಡಿಲಿಕೆ ಬಳಿಕ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಗುರುವಾರ ಶಾಲೆಗಳು ಆರಂಭವಾಗಿದ್ದು, 29,422 ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸವಿದರು.
ಕರೋನಾ ಸಂಕಷ್ಟದಿಂದ ಶಾಲೆಯಿಂದ ದೂರವಾಗಿದ್ದ ಮಕ್ಕಳು ಇಂದು ಉತ್ಸಾಹದಿಂದ ಶಾಲೆಗಳತ್ತ ಮುಖ ಮಾಡಿದ ದೃಶ್ಯ ಕಂಡು ಬಂತು. ಶಾಲೆ ಆರಂಭವಾಗುತ್ತಿದ್ದಂತೆ ಬಿಸಿಯೂಟಕ್ಕೂ ಅನುಮತಿ ನೀಡಿದ್ದು, ಮೊದಲ ದಿನ ಮಕ್ಕಳು ಸಿಹಿ ಊಟ ಮಾಡಿದರು. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 646 ಕ್ಕೂ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿದ್ದು, ಎಲ್ಲ ಶಾಲೆಗಳೂ ಬಾಗಿಲು ತೆರೆದು ಪಾಠ ಆರಂಭಿಸಿವೆ.
ಕರೋನಾ ತಡೆ ನಿಯಮಾವಳಿ ಪಾಲಿಸಿದ್ದು, ಶಾಲೆಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಅಲ್ಲದೇ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಒಟ್ಟಿನಲ್ಲಿ ಕರೋನಾ ನಿಯಮಗಳನ್ನು ಅಳವಡಿಸಿಕೊಂಡು ಶಾಲೆ ಆರಂಭವಾಗಿದ್ದು ಸಂತೋಷದ ಸಂಗತಿಯಾಗಿದೆ.