• first
  second
  third
  previous arrow
  next arrow
 • ಇ-ಖಾತಾ ಸಮಸ್ಯೆ: ಕಾಯಿದೆಯಿಂದ ಜಿಲ್ಲೆಗೆ ವಿನಾಯ್ತಿ ಕೊಡಿಸಲು ಯತ್ನಿಸುವೆ; ಸಚಿವ ಹೆಬ್ಬಾರ

  300x250 AD

  ಶಿರಸಿ: ಇ-ಖಾತಾ ಯೋಜನೆ ಜಾರಿಯಿಂದ ಉದ್ಭವಿಸಿರುವ ಸಮಸ್ಯೆ ಪರಿಹರಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಈ ಹಿಂದೆ ನೀಡಿದಂತೆ ಉತ್ತರ ಕನ್ನಡ ಜಿಲ್ಲೆಗೂ ಈ ಕಾಯಿದೆ ಪರಿಧಿಯಿಂದ ವಿನಾಯ್ತಿ ಕೊಡಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೀಡಿದ್ದಾರೆ.


  ಇ-ಖಾತಾ ಸಮಸ್ಯೆ ಪರಿಹಾರದ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವರದಿ ನೀಡಲೆಂದೇ ರಚಿತವಾದ ಸಚಿವ ಸಂಪುಟ ಅನುಮೋದಿತ ಉಪ ಸಮಿತಿಯ ಸದಸ್ಯರಾಗಿರುವ ಸಚಿವ ಹೆಬ್ಬಾರ ಅವರ ಈ ಭರವಸೆ ನೊಂದಿರುವ ಜನತೆಗೆ ಹೊಸ ಆಶಾಕಿರಣವಾಗಿದೆ.
  ಇ-ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿಯ ನಿಯೋಗ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಅನವಟ್ಟಿ ನೇತೃತ್ವದಲ್ಲಿ 2021 ಅಕ್ಟೋಬರ್ 18 ರಂದು ಸಚಿವರನ್ನು ಶಿರಸಿಯ ಕೆ.ಡಿ.ಸಿ.ಸಿ. ಸಭಾಂಗಣದಲ್ಲಿ ಭೇಟಿಯಾಗಿ ಚರ್ಚಿಸಿದಾಗ ಮೇಲಿನ ಭರವಸೆ ನೀಡಿದ್ದಾರೆ.
  ಇ-ಖಾತಾ ಯೋಜನೆ ಜಾರಿಯಾದ ನಂತರ ವಿಶೇಷವಾಗಿ ರಾಜ್ಯದ ಬಾಂಬೆ ಕರ್ನಾಟಕ ಪ್ರದೇಶದ ಜಿಲ್ಲೆಗಳು ಸಮಸ್ಯೆ ಅನುಭವಿಸುತ್ತಿವೆ. ಮೊದಲಿನಿಂದಲೂ ಈ ಭಾಗದ ಜಿಲ್ಲೆಗಳಲ್ಲಿ ಎಲ್ಲ ತರಹದ ಭೂ ದಾಖಲೆಗಳ ನಿರ್ವಹಣೆ ಕಂದಾಯ ಇಲಾಖೆಯಿಂದಲೇ ನಡೆಯುತ್ತಿತ್ತು. ಕರಾವಳಿ, ಮಲೆನಾಡು, ಗುಡ್ಡಗಾಡು, ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡದಂಥ ಜಿಲ್ಲೆಗಳಲ್ಲಿ ರೂಢಿಯಲ್ಲಿದ್ದ ಕಾಯಿದೆ ನೀತಿಗಳು ಬೇರೆ. ಆಯಾಯ ಕಾಲದ ಕಾನೂನು ಅನುಸರಿಸಿ ಸಂಬಂಧಿತ ಸ್ಥಳೀಯ ಆಡಳಿತ ಅನುಮೋದನೆಯೊಂದಿಗೆ ಸಣ್ಣ, ಸಣ್ಣ ಪ್ರದೇಶಗಳಲ್ಲಿ ವಸತಿ, ವಸತಿನಿವೇಶನ ಸೃಜಿಸಲಾಗಿದೆ.

  300x250 AD


  ಈ ನಿವೇಶನ ವಸತಿ ಆಸ್ತಿಗಳು ಅದೆಷ್ಟೋ ಬಾರಿ ಮಾರಾಟ, ವಾರಸಾ, ವಾಂಟಣಿಗಳು ಆಗಿವೆ. ಆದರೆ ಇದೀಗ ನಗರ ಯೋಜನಾ ಪ್ರಾಧಿಕಾರದ ನಿಯಮಗಳನ್ನು ಒಮ್ಮಿಂದೊಮ್ಮೆಲೇ ಹೇರಿ ಲಕ್ಷಾಂತರ ಆಸ್ತಿಗಳನ್ನು ಅಕ್ರಮ ಆಸ್ತಿ ಎಂದು ಸಾರಲಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ಸರ್ಕಾರಕ್ಕೆ ಆಸ್ತಿ ನೋಂದಣಿ ಮತ್ತಿತರ ಮೂಲದಿಂದ ದೊರೆಯುತ್ತಿದ್ದ ಸಾವಿರಾರು ಕೋಟಿ ರೂಪಾಯಿಗಳ ಆದಾಯ ನಷ್ಟವಾಗುತ್ತಿದೆ. ಗಾರೆ ಕೆಲಸದವರೂ ಸೇರಿದಂತೆ ಹತ್ತಾರು ಕ್ಷೇತ್ರದ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಆಸ್ತಿ ಮಾಲಿಕರು ಆಸ್ತಿ ಹಕ್ಕನ್ನು ಕಳೆದುಕೊಂಡು ಸಂಕಟ ಪಡುವಂತಾಗಿದೆ ಎಂದು ಹೋರಾಟ ಸಮಿತಿ ಪರವಾಗಿ ಗೋಪಾಲಕೃಷ್ಣ ಅನವಟ್ಟಿ ಸಚಿವರಿಗೆ ವಿವರಿಸಿದರು. ಸಮಸ್ಯೆಯ ವಿವರ ಆಲಿಸಿದ ಸಚಿವ ಹೆಬ್ಬಾರ ಅವರು ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಈಗಾಲೇ ಸಮಿತಿಯ ಎರಡು ಸಭೆಗಳಾಗಿವೆ. ಸಮಸ್ಯೆ ಪರಿಹಾರಕ್ಕೆ ಅಗತ್ಯದ ನಿರ್ಧಿಷ್ಟವಾದ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

  ಹೋರಾಟ ಸಮಿತಿ ನಿಯೋಗದಲ್ಲಿ ಭೂ ದಾಖಲೆಗಳ ಕಾಯಿದೆ ಕುರಿತು ಆಳವಾದ ತಿಳುವಳಿಕೆಯಿರುವ ನಿವೃತ್ತ ತಹಶೀಲದ್ದಾರ ಜಿ.ಎಸ್. ಹೆಗಡೆ, ವಕೀಲರಾದ ನಾಗರಾಜ ಭಟ್ಟ, ರಾಜಾರಾಮ ಹೆಗಡೆ, ರಾಜು ಪೈ, ಪ್ರಕಾಶ ಸಾಲೇರ, ಅನಿಲ ನಾಯಕ, ಭಾಸ್ಕರ ಮಡಿವಾಳ, ಲಿಂಗರಾಜು ಮತ್ತು ದೇವರಾಜ ಹೊಸೂರ ಮುಂತಾದವರಿದ್ದರು.

  Share This
  300x250 AD
  300x250 AD
  300x250 AD
  Back to top