• first
  second
  third
  previous arrow
  next arrow
 • ಆರ್ ಎಸ್ ಎಸ್ ಜಾತಿವಾದ & ವ್ಯಕ್ತಿಪೂಜೆ ಪ್ರತಿಪಾದಿಸುವುದಿಲ್ಲ; ಸುನಿಲ್ ಹೆಗಡೆ

  300x250 AD

  ಹಳಿಯಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದುತ್ವ, ರಾಷ್ಟ್ರೀಯತೆಯ ಮಹಾನ್ ಸಂಘಟನೆಯಾಗಿದೆ. ಸಂಘದ ಕಾರ್ಯಕರ್ತರು ತತ್ವ ಹೊರತುಪಡಿಸಿ ಜಾತಿವಾದದ ಹಾಗೂ ವ್ಯಕ್ತಿಪೂಜೆಯ ಪ್ರತಿಪಾದನೆ ಮಾಡುವುದಿಲ್ಲ. ಹೀಗಾಗಿ ಪಕ್ಷ ರಾಜಕೀಯದಲ್ಲಿ ಸಂಘದ ಕಾರ್ಯಕರ್ತರನ್ನು ಉಲ್ಲೇಖಿಸುವುದು ಸರಿಯಲ್ಲ ಎಂದು ಮಾಜಿ ಶಾಸಕ ಸುನಿಲ ಹೆಗಡೆ ಹೇಳಿದರು.

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹೊರತುಪಡಿಸಿ ವೈಯಕ್ತಿಕ ಅಭಿಮಾನಿಗಳ ಬಳಗವನ್ನು ಕಟ್ಟುತ್ತಿರುವ ವಿಧಾನಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ್ ಅವರನ್ನು ಟೀಕಿಸುವಾಗ ಬ್ಲಾಕ್ ಕಾಂಗ್ರೆಸ್ ಅನಾವಶ್ಯಕವಾಗಿ ಘೋಟ್ನೇಕರ್ ಬಳಗದಲ್ಲಿ ಆರ್.ಎಸ್.ಎಸ್ ಸಂಘಟನೆಯ ಐವರು ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುವುದನ್ನು ಖಂಡಿಸುವುದಾಗಿ ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು, ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯತ್ವದ ಎರಡನೇಯ ಅವಧಿಯನ್ನು, ಅಂದರೆ ಬರೋಬ್ಬರಿ 12 ವರ್ಷಗಳನ್ನು ಶ್ರೀಕಾಂತ ಘೋಟ್ನೇಕರ್ ಮುಕ್ತಾಯಗೊಳಿಸುತ್ತಿದ್ದಾರೆ. ಈ ಅವಧಿಯಲ್ಲಿ ಜಿಲ್ಲೆಯ ಒಂದೂ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡದ, ಪಂಚಾಯತಿ ವ್ಯವಸ್ಥೆಯ ಬಗ್ಗೆ ವಿಧಾನಪರಿಷತ್ ನಲ್ಲಿ ಚಕಾರವೆತ್ತದೆ ಘೋಟ್ನೇಕರ್ ತನಗೆ ಪಂಚಾಯತ ವ್ಯವಸ್ಥೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ.ಇAತಹ ವ್ಯಕ್ತಿಯನ್ನು ಎಮ್.ಎಲ್.ಸಿ ಮಾಡಿರುವ ಆರ್. ವಿ. ದೇಶಪಾಂಡೆ ಅವರೂ ಸಹ ಇದರಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂದರು.

  ತನ್ನ ನಾಲ್ಕು ದಶಕಗಳ ರಾಜಕೀಯ ಜೀವನದುದ್ದಕ್ಕೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ, ಉಪಾಧ್ಯಕ್ಷ, ಅಧ್ಯಕ್ಷ, ಎಮ್.ಎಲ್.ಸಿ ಮೊದಲಾದ ಹಲವಾರು ಪ್ರಮುಖ ಹುದ್ದೆಗಳನ್ನು ಘೋಟ್ನೇಕರ್ ತನ್ನ ವೈಯಕ್ತಿಕ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ಜನರಿಗಾಗಿ ಏನೂ ಮಾಡಿಲ್ಲ. ಈಗ ಅವರದೇ ಕಾಂಗ್ರೆಸ್ ಪಕ್ಷದಲ್ಲಿ ಅಸ್ತಿತ್ವ ಇಲ್ಲದಿರುವುದರಿಂದ ತನ್ನ ವೈಯಕ್ತಿಕ ಬಳಗ ಕಟ್ಟಿಕೊಳ್ಳುವುದಾಗಿ ಹೇಳಿ ಅಲ್ಲಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ಆವರ ವೈಯಕ್ತಿಕ ಬಳಗಕ್ಕೆ ಬಿಜೆಪಿಯ ಯಾವುದೇ ಕಾರ್ಯಕರ್ತರು ಸೇರ್ಪಡೆಯಾಗುತ್ತಿಲ್ಲ. ಹೀಗಿದ್ದರೂ ಸಹ ಘೋಟ್ನೇಕರ್ ಬಳಗಕ್ಕೆ ಬಿಜೆಪಿ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ ಎಂದು ಸುಳ್ಳು ಬಿಂಬಿಸಿಕೊAಡರೆ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕಲಾಗುವುದು ಎಂದು ಎಚ್ಚರಿಸಿದರು.

  300x250 AD

  ಹಳಿಯಾಳ ಭಾಗದಲ್ಲಿ ಹಿಂದುಗಳಿಗೆ ಮತಾಂತರ ಮಾಡುವ ಕೃತ್ಯಗಳು ನಡೆಯುತ್ತಿರುವುದು ಸರಿಯಲ್ಲ. ಇದು ತಕ್ಷಣ ನಿಲ್ಲಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗಣಪತಿ ಕರಂಜೇಕರ, ಉಪಾಧ್ಯಕ್ಷ ವಾಸುದೇವ ಪೂಜಾರಿ, ಹಿರಿಯ ಮುಖಂಡ ಶಿವಾಜಿ ಪಾಟೀಲ, ಪುರಸಭೆಯ ಸದಸ್ಯರಾದ ಚಂದ್ರಕಾAತ ಕಮ್ಮಾರ, ಸಂತೋಷ ಘಟಕಾಂಬಳೆ, ಪದಾಧಿಕಾರಿಗಳಾದ ಶಿವಾಜಿ ನರಸಾನಿ, ಅನಿಲ ಮುತ್ನಾಳೆ ಮೊದಲಾದವರು ಇದ್ದರು

  Share This
  300x250 AD
  300x250 AD
  300x250 AD
  Back to top