• first
    second
    third
    previous arrow
    next arrow
  • ಸಂಭ್ರಮದ ಭೂಮಿ ಪೂಜೆ ಆಚರಣೆ

    300x250 AD

    ಮುಂಡಗೋಡ: ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ರೈತರು ಹೊಲಕ್ಕೆ ಕುಟುಂಬ ಸಮೇತರಾಗಿ ಹೋಗಿ ಶೀಗೆ ಹುಣ್ಣಿಮೆ (ಭೂಮಿ ಪೂಜೆ) ಯನ್ನು ಸಂಭ್ರಮದಿಂದ ಆಚರಿಸಿದರು.


    ವರ್ಷಪೂರ್ತಿ ಬೆವರು ಹರಿಸಿದ ರೈತರು ಉತ್ತಮ ಫಸಲು ಬಂದಾಗ ಕೊಯ್ಯುವ ಮುಂಚೆ ಭೂಮಿ ತಾಯಿಗೆ ನಮಿಸುತ್ತಾರೆ. ಶೀಗೆ ಹುಣ್ಣಿಮೆಯಂದು ಪೂಜೆ ಸಲ್ಲಿಸಿ ಭೂತಾಯಿಗೆ ವಂದಿಸುತ್ತಾರೆ. ರೈತ ಕುಟುಂಬದ ಸದಸ್ಯರೆಲ್ಲಾ ಸೇರಿ ತಮ್ಮ ತಮ್ಮ ಹೊಲಗಳಿಗೆ ಮತ್ತು ತೋಟಗಳಿಗೆ ಚಕ್ಕಡಿ, ಟ್ರ್ಯಾಕ್ಟರ ಹಾಗೂ ಬೈಕ್‍ಗಳಲ್ಲಿ ಮತ್ತು ಇನ್ನು ಕೆಲವರು ನಡೆಯುತ್ತಾ ಹೊಲಕ್ಕೆ ತೆರಳಿ ಬಂದಿರುವ ಫಸಲನ್ನು ಕಣ್ತುಂಬಿಕೊಂಡು ಭೂತಾಯಿಗೆ ಸೀರೆ ಉಡಿಸಿ ಪೂಜೆ ಸಲ್ಲಿಸಿದರು. ಭೂತಾಯಿ ನಿನ್ನ ಆಶಿರ್ವಾದದಿಂದ ಗದ್ದೆಯಲ್ಲಿ ಹಸಿರುಮಯವಾಗಿದೆ. ಗಟ್ಟಿ ತೆನೆ ಕಾಳು ಬಂದು ಕಣಜ ತುಂಬಲಿ. ವರ್ಷಪೂರ್ತಿ ನಿನ್ನ ಆಶೀರ್ವಾದ ರೈತರ ಮೇಲಿರಲಿ ಎಂದು ಬೇಡಿಕೊಂಡು ಪೂಜೆ ಸಲ್ಲಿಸಿದರು.
    ಮನೆಯಲ್ಲಿ ಮಾಡಿದ್ದ ನೈವೇದ್ಯವನ್ನು ಭೂತಾಯಿಗೆ ಎಡೆ ಮಾಡಿ ನಂತರ ಗದ್ದೆಯ ಸುತ್ತಲೂ ಚರಗ ಚೆಲ್ಲಿದರು. ಯಾವುದೇ ಕಷ್ಟ ತೊಂದರೆಗಳು ಬಾರದಿರಲಿ. ಬೆಳೆಯ ಮೇಲೆ ದುಷ್ಟ ಶಿಕ್ತಿಗಳ ಕಣ್ಣು ಬೀಳದಿರಲಿ. ಕಣಜ ತುಂಬಲು ಸದಾ ನಿನ್ನ ರಕ್ಷಣೆ ಇರಲಿ ಎಂದು ಪ್ರಾರ್ಥಿಸುತ್ತ ಚೆರಗ ಚೆಲ್ಲಿದರು.

    300x250 AD


    ಬೆಳೆದು ನಿಂತ ಪೈರಿನಲ್ಲಿನ ಒಂದು ಜಾಗದಲ್ಲಿ ಉಡಿ ಉಂಬಿ ಸೀರೆ, ಕುಪ್ಪಸ ತೊಡಿಸಿ ಪೂಜಿಸಿ ಆರಾಧಿಸಿದ ರೈತ ಕುಟುಂಬದವರು ಅಲ್ಲಿ ಪಾಂಡವರ ಮೂರ್ತಿಗಳನ್ನು ಮಾಡಿ ಅವುಗಳಿಗೆ ಪೂಜೆ ಸಲ್ಲಿಸಿದರು. ವಿಶೇಷ ಬಗೆಯ ಸಿಹಿ ಕುಂಬಳಕಾಯಿ ಕಡುಬು ಮತ್ತು ನಾನಾ ತರದ ಖಾದ್ಯಗಳನ್ನು ಮಾಡಿ ಭೂಮಿ ತಾಯಿಗೆ ನೈವೇದ್ಯ ಅರ್ಪಿಸಲಾಯಿತು. ನಂತರ ಫಸಲು ಸಮೃದ್ಧವಾಗಿರಲೆಂದು ಹೊಲದ ಸುತ್ತಲೂ ಐದು ಬಗೆಯ ಪದಾರ್ಥಗಳನ್ನು ಚೆರಗದ ರೂಪದಲ್ಲಿ ಚೆಲ್ಲಲಾಯಿತು. ಎಲ್ಲ ಪೂಜಾ ವಿದಿ-ವಿಧಾನಗಳನ್ನು ಶೀಗೆ ಹುಣ್ಣಿಮೆ ಆಚರಿಸಿದರು.
    ಕುಟುಂಬ ಸಮೇತರಾಗಿ ಹೊಲಗದ್ದೆಗಳಿಗೆ ತೆರಳಿದ್ದ ರೈತ ಕುಟುಂಬಗಳು ಹೊಲದ ಮಧ್ಯ ಭಾಗದಲ್ಲಿ ಇಲ್ಲವೇ ಗಿಡದ ಕೆಳಗೆ ಕುಳಿತು ಬೆಳೆಯ ಬಗ್ಗೆ ಮಾತನಾಡುತ್ತ ಕಾಲ ಕಳೆದರು. ವರ್ಷಪೂರ್ತಿ ದುಡಿದ ದಿನಗಳು, ಈ ಸಲ ಇಷ್ಟು ಚೀಲ ಬೆಳೆ ಬರಬಹುದು ಎಂದೆಲ್ಲ ತಮ್ಮ ತಮ್ಮಲ್ಲಿಯೇ ಚರ್ಚೆ ಮಾಡಿದರು. ಮನೆ ಮಮಧಿಯಲ್ಲರೂ ಬೆಳೆಯನ್ನು ಕಣ್ತುಂಬಿಕೊಂಡು ಒಟ್ಟಿಗೆ ಕುಳಿತು ಸಿಹಿ ಊಟ ಮಾಡಿದರು. ಬೆಳಿಗ್ಗೆಯಿಂದ ಸಂಜೆವರೆಗೆ ಹೊಲದಲ್ಲಿಯೇ ಕಾಲ ಕಳೆದು ಸಂಜೆಯ ವೇಳೆಗೆ ಮನೆಯತ್ತ ಸಂತಸದಿಂದ ಮರಳಿದರು.

    Share This
    300x250 AD
    300x250 AD
    300x250 AD
    Back to top