• Slide
    Slide
    Slide
    previous arrow
    next arrow
  • ನಾಟಿ ವೈದ್ಯೆ ಲಕ್ಷ್ಮೀ ಸಿದ್ದಿಗೆ ‘ವಾಲ್ಮೀಕಿ ಪ್ರಶಸ್ತಿ’ ಪ್ರದಾನ

    300x250 AD

    ಬೆಂಗಳೂರು: ವಾಲ್ಮೀಕಿ ಜಯಂತಿ ಪ್ರಯುಕ್ತ ನೀಡಲಾಗುವ `ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಗೆ ಯಲ್ಲಾಪುರ ತಾಲೂಕಿನ ಮಾಗೋಡಿನ ಲಕ್ಷ್ಮೀ ಗಣಪತಿ ಸಿದ್ದಿ ಆಯ್ಕೆಯಾಗಿದ್ದು, ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಪ್ರಶಸ್ತಿ ಪ್ರದಾನಿಸಿದರು.

    ಈ ಪ್ರಶಸ್ತಿಯು 5 ಲಕ್ಷ ನಗದು ಬಹುಮಾನ, 20 ಗ್ರಾಂ ಚಿನ್ನದ ಪದಕ, ಫಲಕವನ್ನು ಒಳಗೊಂಡಿದೆ. ಈ ಬಾರಿ ಐವರು ಸಾಧಕರು ಮತ್ತು 2021 ನೇ ಸಾಲಿಗೆ ಸಂಬಂಧಿಸಿದಂತೆ 6 ಸಾಧಕರು ಸೇರಿ ಒಟ್ಟು 11 ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಈ ಸಾಧಕರಿಗೆ ಇಂದು ಪ್ರಶಸ್ತಿ ಪ್ರದಾನಿಸಲಾಯಿತು.

    300x250 AD

    2020 ನೇ ಸಾಲಿಗೆ ಸಂಬಂಧಿಸಿದಂತೆ ಡಾ. ಕೆ. ಆರ್. ಪಾಟೀಲ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಿ. ಎಲ್. ವೇಣು, ಸಮಾಜ ಸೇವೆಗೆ ಸಂಬಂಧಿಸಿದಂತೆ ಗೌರಿ ಕೊರಗ, ಸಂಘಟನೆಗೆ ಸಂಬಂಧಿಸಿದಂತೆ ಮಾರಪ್ಪ ನಾಯಕ, ಸಮಾಜ ಸೇವೆಗೆ ಸಂಬಂಧಿಸಿದಂತೆ ತಿಪ್ಪೇಸ್ವಾಮಿ ಎಚ್. ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 2021 ಕ್ಕೆ ಸಂಬಂಧಿಸಿದಂತೆ ಸಮಾಜ ಸೇವಾ ಕ್ಷೇತ್ರದಲ್ಲಿ ಕೆ. ಸಿ. ನಾಗರಾಜು, ಲಕ್ಷ್ಮೀ ಗಣಪತಿ ಸಿದ್ದಿ, ಭಟ್ರಹಳ್ಳಿ ಗೂಳಪ್ಪ, ಅಶ್ವತ್ಥ ರಾಮಯ್ಯ, ಜಂಬಯ್ಯ ನಾಯಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರೊ. ಎಸ್. ಆರ್. ನಿರಂಜನ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top